alex Certify ಎದೆ ನಡುಗಿಸುವಂತಿದೆ ಏಕಾಏಕಿ ದಾಳಿ ನಡೆಸಿದ ಅನಕೊಂಡದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುವಂತಿದೆ ಏಕಾಏಕಿ ದಾಳಿ ನಡೆಸಿದ ಅನಕೊಂಡದ ವಿಡಿಯೋ

ದೈತ್ಯ ಆನಕೊಂಡವೊಂದು ಏಕಾಏಕಿ ಜಿಗಿದು ದೋಣಿಯಲ್ಲಿ ಕುಳಿತ ವ್ಯಕ್ತಿಯನ್ನು ಕಚ್ಚುವ ಎದೆ ಝಲ್ಲೆನ್ನಿಸುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಆನಕೊಂಡಗಳು ತಮ್ಮ ಹೆಚ್ಚಿನ ಸಮಯವನ್ನು ನೀರಿನಲ್ಲಿ ಕಳೆಯುತ್ತವೆ, ಸಾಮಾನ್ಯವಾಗಿ ಜೌಗು ಪ್ರದೇಶಗಳು, ನಿಧಾನವಾಗಿ ಹರಿಯುವ ನದಿಗಳಲ್ಲಿ ಇರುತ್ತದೆ. ಈ ಘಟನೆ ನಡೆದಿರುವುದು ಬ್ರೆಜಿಲ್​ನಲ್ಲಿ, ಪ್ರವಾಸಿ ಗೈಡ್​ ಮೇಲೆ ದಾಳಿ ಮಾಡುವ ಅನಕೊಂಡ ಕಂಡು ಅಲ್ಲಿದ್ದ ಪ್ರವಾಸಿಗಳು ಭಯ ಬೀಳುತ್ತಾರೆ.

ಜೂನ್​ 30 ರಂದು ಮಧ್ಯ ಬ್ರೆಜಿಲಿಯನ್​ ರಾಜ್ಯವಾದ ಗೋಯಾಸ್​ನಲ್ಲಿನ ಅರಗುವಾಯಾ ನದಿಯಲ್ಲಿ ದೋಣಿಯಲ್ಲಿ ಪ್ರವಾಸಿಗರ ಗುಂಪನ್ನು ಮುನ್ನಡೆಸುತ್ತಿದ್ದ 38 ವರ್ಷದ ಜೊಮೊ ಸೆವೆರಿನೊ ಅವರು ಕ್ಯಾಮೆರಾದಲ್ಲಿ ಈ ಆಘಾತಕಾರಿ ದಾಳಿಯನ್ನು ಸೆರೆಹಿಡಿದಿದ್ದಾರೆ.

ಮೀನುಗಾರಿಕಾ ಗೈಡ್​ ಹಾವನ್ನು ಮೊದಲು ಗುರುತಿಸಿದರು, ಇತರ ಪ್ರವಾಸಿಗರಿಗೆ ತೋರಿಸುತ್ತಾ ಚಿತ್ರೀಕರಿಸುತ್ತಿದ್ದಾರೆ ಅದು ಹೊರಗೆ ಬಂದು ದಾಳಿ ಮಾಡಿದೆ. ನೀರಿನಲ್ಲಿ ಸುರುಳಿಯಾಕಾರದ ಕಪ್ಪು ಚುಕ್ಕೆಯ ಹಾವಿನ ಮೇಲೆ ಕ್ಯಾಮೆರಾ ಜೂಮ್​ ಮಾಡಿದ ಸಂದರ್ಭದಲ್ಲಿ ಅದು ನೀರಿನಿಂದ ಹಾರಿ ಪ್ರವಾಸ ಮಾರ್ಗದರ್ಶಿಯನ್ನು ಕಚ್ಚುತ್ತದೆ, ಅವರು ಆಘಾತದಿಂದ ಕೂಗುತ್ತಾರೆ.

ಅದೃಷ್ಟವಶಾತ್​, ಅನಕೊಂಡದ ಕಚ್ಚುವಿಕೆಯು ಗೈಡ್‌ನ ಚರ್ಮವನ್ನು ಭೇದಿಸಲು ಸಾಧ್ಯವಾಗಲಿಲ್ಲ ಮತ್ತು ದಾಳಿಯಿಂದ ವಿಚಲಿತರಾದರೂ ಗಹಗಹಿಸಿ ನಕ್ಕಿದ್ದಾರೆ.

ಹಸಿರು ಅನಕೊಂಡವು ವಿಶ್ವದ ಅತಿದೊಡ್ಡ ಹಾವು, ಇದು 30 ಅಡಿ ಉದ್ದ ಮತ್ತು 10 ಇಂಚುಗಳಷ್ಟು ವ್ಯಾಸದೊಂದಿಗೆ 550 ಪೌಂಡ್​ಗಳವರೆಗೆ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...