ದೈತ್ಯ ಆನಕೊಂಡವೊಂದು ಏಕಾಏಕಿ ಜಿಗಿದು ದೋಣಿಯಲ್ಲಿ ಕುಳಿತ ವ್ಯಕ್ತಿಯನ್ನು ಕಚ್ಚುವ ಎದೆ ಝಲ್ಲೆನ್ನಿಸುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆನಕೊಂಡಗಳು ತಮ್ಮ ಹೆಚ್ಚಿನ ಸಮಯವನ್ನು ನೀರಿನಲ್ಲಿ ಕಳೆಯುತ್ತವೆ, ಸಾಮಾನ್ಯವಾಗಿ ಜೌಗು ಪ್ರದೇಶಗಳು, ನಿಧಾನವಾಗಿ ಹರಿಯುವ ನದಿಗಳಲ್ಲಿ ಇರುತ್ತದೆ. ಈ ಘಟನೆ ನಡೆದಿರುವುದು ಬ್ರೆಜಿಲ್ನಲ್ಲಿ, ಪ್ರವಾಸಿ ಗೈಡ್ ಮೇಲೆ ದಾಳಿ ಮಾಡುವ ಅನಕೊಂಡ ಕಂಡು ಅಲ್ಲಿದ್ದ ಪ್ರವಾಸಿಗಳು ಭಯ ಬೀಳುತ್ತಾರೆ.
ಜೂನ್ 30 ರಂದು ಮಧ್ಯ ಬ್ರೆಜಿಲಿಯನ್ ರಾಜ್ಯವಾದ ಗೋಯಾಸ್ನಲ್ಲಿನ ಅರಗುವಾಯಾ ನದಿಯಲ್ಲಿ ದೋಣಿಯಲ್ಲಿ ಪ್ರವಾಸಿಗರ ಗುಂಪನ್ನು ಮುನ್ನಡೆಸುತ್ತಿದ್ದ 38 ವರ್ಷದ ಜೊಮೊ ಸೆವೆರಿನೊ ಅವರು ಕ್ಯಾಮೆರಾದಲ್ಲಿ ಈ ಆಘಾತಕಾರಿ ದಾಳಿಯನ್ನು ಸೆರೆಹಿಡಿದಿದ್ದಾರೆ.
ಮೀನುಗಾರಿಕಾ ಗೈಡ್ ಹಾವನ್ನು ಮೊದಲು ಗುರುತಿಸಿದರು, ಇತರ ಪ್ರವಾಸಿಗರಿಗೆ ತೋರಿಸುತ್ತಾ ಚಿತ್ರೀಕರಿಸುತ್ತಿದ್ದಾರೆ ಅದು ಹೊರಗೆ ಬಂದು ದಾಳಿ ಮಾಡಿದೆ. ನೀರಿನಲ್ಲಿ ಸುರುಳಿಯಾಕಾರದ ಕಪ್ಪು ಚುಕ್ಕೆಯ ಹಾವಿನ ಮೇಲೆ ಕ್ಯಾಮೆರಾ ಜೂಮ್ ಮಾಡಿದ ಸಂದರ್ಭದಲ್ಲಿ ಅದು ನೀರಿನಿಂದ ಹಾರಿ ಪ್ರವಾಸ ಮಾರ್ಗದರ್ಶಿಯನ್ನು ಕಚ್ಚುತ್ತದೆ, ಅವರು ಆಘಾತದಿಂದ ಕೂಗುತ್ತಾರೆ.
ಅದೃಷ್ಟವಶಾತ್, ಅನಕೊಂಡದ ಕಚ್ಚುವಿಕೆಯು ಗೈಡ್‌ನ ಚರ್ಮವನ್ನು ಭೇದಿಸಲು ಸಾಧ್ಯವಾಗಲಿಲ್ಲ ಮತ್ತು ದಾಳಿಯಿಂದ ವಿಚಲಿತರಾದರೂ ಗಹಗಹಿಸಿ ನಕ್ಕಿದ್ದಾರೆ.
ಹಸಿರು ಅನಕೊಂಡವು ವಿಶ್ವದ ಅತಿದೊಡ್ಡ ಹಾವು, ಇದು 30 ಅಡಿ ಉದ್ದ ಮತ್ತು 10 ಇಂಚುಗಳಷ್ಟು ವ್ಯಾಸದೊಂದಿಗೆ 550 ಪೌಂಡ್ಗಳವರೆಗೆ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.