alex Certify ನಗೆಗಡಲಲ್ಲಿ ತೇಲಿಸುತ್ತೆ ವಧು-ವರನಿಂದ ಸ್ನೇಹಿತರು ಆಶೀರ್ವಾದ ಪಡೆದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗೆಗಡಲಲ್ಲಿ ತೇಲಿಸುತ್ತೆ ವಧು-ವರನಿಂದ ಸ್ನೇಹಿತರು ಆಶೀರ್ವಾದ ಪಡೆದ ವಿಡಿಯೋ

ಶಾಸ್ತ್ರ, ಸಂಪ್ರದಾಯದ ಜೊತೆಗೆ ಇತ್ತೀಚಿನ ದಿನಗಳಲ್ಲಿ ವಿನೋದ ಹಾಗೂ ಮೋಜಿಲ್ಲದೆ ಯಾವುದೇ ಮದುವೆ ಪೂರ್ಣವಾಗುವುದಿಲ್ಲ ಎಂಬಂತಾಗಿದೆ. ಸ್ನೇಹಿತರು, ಹಿತೈಷಿಗಳು ಮೋಜಿಗಾಗಿ ಏನಾದರೊಂದು ಮಾಡುತ್ತಿರುತ್ತಾರೆ. ಸದ್ಯ ಇಲ್ಲೊಂದೆಡೆ ನೂತನ ವಧು-ವರರಿಗೆ ವಿಭಿನ್ನವಾಗಿ ಸ್ನೇಹಿತರು ಶುಭ ಹಾರೈಸಿದ್ದಾರೆ.

ಸದ್ಯ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು ಭಾರಿ ವೈರಲ್ ಆಗಿದೆ. ನೂತನ ವಧುವರರು ಕುಳಿತಿದ್ದ ವೇದಿಕೆಗೆ ಬಂದ ಸ್ನೇಹಿತರು ಇಬ್ಬರಿಗೂ ನಾಣ್ಯ ಕೊಟ್ಟಿದ್ದಾರೆ. ಜೊತೆಗೆ ಅವರಿಂದಲೇ ಆಶೀರ್ವಾದವೂ ಪಡೆದಿದ್ದಾರೆ. ಒಬ್ಬೊಬ್ಬರಾಗಿ ಸರದಿಯಲ್ಲಿ ಬಂದ ಸ್ನೇಹಿತರ ಈ ವಿಲಕ್ಷಣ ಘಟನೆಗೆ ವಧು-ವರ ಕೊಂಚ ವಿಚಲಿತರಾದರೂ ಬಳಿಕ ನಗೆಗಡಲಲ್ಲಿ ತೇಲಿದ್ರು.

ಯುಟ್ಯೂಬ್ ನಲ್ಲಿ ಸಿಗ್ತಿದೆ ಭರ್ಜರಿ ಗಳಿಕೆಗೆ ಅವಕಾಶ

ಇತ್ತೀಚೆಗಿನ ದಿನಗಳಲ್ಲಿ ಹಲವಾರು ದೇಸಿ ಮದುವೆ ವಿಡಿಯೋಗಳು ಭಾರಿ ವೈರಲ್ ಆಗುತ್ತಿವೆ. ವಧುವೊಬ್ಬಳು ಫುಶ್ ಅಪ್ ಮಾಡುವ ವಿಡಿಯೋದಿಂದ ಹಿಡಿದು ವರ ಕಬ್ಬಡ್ಡಿ ಆಡುವ ದೃಶ್ಯದವರೆಗೂ ಭಾರಿ ವೈರಲ್ ಆಗುತ್ತಿದೆ. ಇದೀಗ ಈ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...