alex Certify ಟ್ರಕ್​ ತಡೆದು ಶುಲ್ಕ ವಸೂಲಿ ಮಾಡಿದ ಆನೆಗಳು…! ಮನಸ್ಸಿಗೆ ಮುದ ನೀಡುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಕ್​ ತಡೆದು ಶುಲ್ಕ ವಸೂಲಿ ಮಾಡಿದ ಆನೆಗಳು…! ಮನಸ್ಸಿಗೆ ಮುದ ನೀಡುತ್ತೆ ಈ ವಿಡಿಯೋ

ವೈರಲ್‌ ವಿಡಿಯೋಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ, ಬಹುತೇಕ ವಿಡಿಯೋಗಳು ನಗುವಿನ ಅಲೆಯನ್ನು ಚಿಮ್ಮಿಸಿದರೆ ಕೆಲವು ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತವೆ. ಇನ್ನು ಕೆಲವು ನಗೆ ಚಟಾಕಿಗಳಿಗೆ ಕಾರಣವಾಗುತ್ತವೆ. ಅಂತಹ ಒಂದು ವಿಡಿಯೋ ಆನೆಯದ್ದು.

ರಸ್ತೆಯ ಮೇಲೆ ಹೋಗುತ್ತಿದ್ದ ಟ್ರಕ್​ ಒಂದನ್ನು ನಿಲ್ಲಿಸಿ ಆನೆಗಳು ಕಬ್ಬು ತಿನ್ನುತ್ತಿರುವ ದೃಶ್ಯವೊಂದು ಹಾಸ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಆಗುತ್ತಿವೆ. ಟ್ರಕ್ ತಮ್ಮ ಪ್ರದೇಶವನ್ನು ಹಾದುಹೋಗುವುದಕ್ಕೆ ಅಗತ್ಯವಾದ ಟೋಲ್ ಶುಲ್ಕವನ್ನು ಆನೆಗಳು ಪಡೆಯುತ್ತಿರುವುದಾಗಿ ನೆಟ್ಟಿಗರು ಹಾಸ್ಯ ಮಾಡುತ್ತಿದ್ದಾರೆ.

ಎರಡು ಆನೆಗಳನ್ನು ವಿಡಿಯೋದಲ್ಲಿ ನೋಡಬಹುದು. ಆನೆಗಳು ಬರುತ್ತಿದ್ದಂತೆಯೇ ಟ್ರಕ್​ ಡ್ರೈವರ್​ ಗಾಡಿಯನ್ನು ನಿಲ್ಲಿಸಿ ಅದಕ್ಕೆ ಬೇಕಾದಷ್ಟು ಕಬ್ಬನ್ನು ತಿನ್ನಲು ನೀಡಿದ್ದಾನೆ. ಹಿಂದುಗಡೆ ವಾಹನಗಳ ಸವಾರರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿದ್ದಾರೆ.

ಅರಣ್ಯ ಅಧಿಕಾರಿ ಈ ವಿಡಿಯೋ ಶೇರ್‌ ಮಾಡುತ್ತ ಟ್ಯಾಕ್ಸ್‌ ಡಿಡಕ್ಷನ್‌ ಆ್ಯಟ್​ ಸೋರ್ಸ್‌ (TDS) ಎಂದು ಕ್ಯಾಪ್ಶನ್‌ ಕೊಟ್ಟಿದ್ದಾರೆ. ಇದು 80 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 3,500 ಲೈಕ್‌ಗಳೊಂದಿಗೆ ವೀಡಿಯೊ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...