alex Certify ಮಹಿಳೆಗೆ ಪ್ಯಾಕೇಜ್​ ತಲುಪಿಸಲು ರೈಲಿನ ಹಿಂದೆ ಓಡಿದ ಡೋಂಜೋ ಪ್ರತಿನಿಧಿ; ಡಿಡಿಎಲ್​ಜೆ- 2 ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಗೆ ಪ್ಯಾಕೇಜ್​ ತಲುಪಿಸಲು ರೈಲಿನ ಹಿಂದೆ ಓಡಿದ ಡೋಂಜೋ ಪ್ರತಿನಿಧಿ; ಡಿಡಿಎಲ್​ಜೆ- 2 ಎಂದ ನೆಟ್ಟಿಗರು

ಆನ್​ಲೈನ್​ ಶಾಪಿಂಗ್​ ಮತ್ತು ಡೆಲಿವರಿ ಅಪ್ಲಿಕೇಶನ್​ ಅನೇಕರಿಗೆ ಜೀವನ ಕಟ್ಟಿಕೊಟ್ಟಿದೆ. ಈ ವೃತ್ತಿಯಲ್ಲಿ ಅನೇಕರು ಅಸಾಧಾರಣ ಸೇವೆ ನೀಡಿ ಆಗಾಗ್ಗೆ ಗಮನ ಸೆಳೆಯುತ್ತಾರೆ. ಇಂತಹ ಒಂದು ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡಂಜೊ ಡೆಲಿವರಿ ಏಜೆಂಟ್​ ಮಹಿಳೆಯೊಬ್ಬರಿಗೆ ಪ್ಯಾಕೇಜ್​ ನೀಡಲು ರೆೈಲಿನ ಜೊತೆ ಓಡುತ್ತಿರುವುದನ್ನು ತೋರಿಸುವ ವಿಡಿಯೋ ಕ್ಲಿಪ್​ ಅನ್ನು ಮುಂಬೈ ಮೂಲದ ಸೆಲೆಬ್ರಿಟಿ ಫೋಟೋಗ್ರಾಫರ್​ ವೆೈರಲ್​ ಭಯಾನಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದು 1.2 ಮಿಲಿಯನ್​ ವೀಕ್ಷಣೆ ಗಳಿಸಿದ್ದು, 70 ಸಾವಿರ ಲೈಕ್​ ಪಡೆದುಕೊಂಡಿದೆ. “ಪುಷ್ಪಾ ಜುಕೆಗಾ ನಹಿ, ಡಂಝೋ ರುಕೇಗಾ ನಹಿ,” ಶೀರ್ಷಿಕೆಯನ್ನು ನೀಡಲಾಗಿದೆ.

ಡಂಜೊ ಡೆಲಿವರಿ ಪ್ರತಿನಿಧಿ ನಿಲ್ದಾಣದಿಂದ ಹೊರಡುತ್ತಿರುವ ರೈಲಿನ ಹಿಂದೆ ಓಡುತ್ತಿದ್ದು, ರೈಲಿನಲ್ಲಿದ್ದ ಮಹಿಳೆ ವೇಗವಾಗಿ ಓಡಿಬರುವಂತೆ ಸನ್ನೆ ಮಾಡುತ್ತಿದ್ದರು. ಆ ಪ್ರತಿನಿಧಿ ತನಗೆ ಸಾಧ್ಯವಾದಷ್ಟು ವೇಗವಾಗಿ ಓಡಿ ಮಹಿಳೆಗೆ ತನ್ನ ಪ್ಯಾಕೇಜ್​ ಅನ್ನು ಯಶಸ್ವಿಯಾಗಿ ಹಸ್ತಾಂತರಿಸಿದರು. ಕೊನೆಗೆ ಆಕೆ ಸಂತೋಷದಿಂದ ಪ್ಯಾಕ್​ ಸಿಕ್ಕ ಖುಷಿಯಲ್ಲಿ ಕೈ ಬೀಸುವುದು ಕಾಣಿಸುತ್ತದೆ. ಅಂದಹಾಗೆ ‘ತುಜೆ ದೇಖಾ ತೋ ಯೇ ಜಾನಾ ಸನಮ್​…….’ ಹಾಡು ರೀಲ್​ನಲ್ಲಿಯೂ ಪ್ಲೇ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಖುಷಿಯಿಂದ ಕಾಮೆಂಟ್​ ಮಾಡಿದ್ದು, ಒಬ್ಬರು ಡಿಡಿಎಲ್​ಜೆ- 2 ಎಂದು ಬಣ್ಣಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...