alex Certify ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲೇ ಯುವತಿಯ ರಂಪಾಟ; ಆಕೆಯ ಅವಾಂತರ ಕಂಡು ಪೊಲೀಸರೇ ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲೇ ಯುವತಿಯ ರಂಪಾಟ; ಆಕೆಯ ಅವಾಂತರ ಕಂಡು ಪೊಲೀಸರೇ ಕಂಗಾಲು

ಈ ಗುಂಡಿನ ಮತ್ತೇ ಅಂತಹದ್ದು. ಶರೀರಕ್ಕೆ ಮದ್ಯ ಹೋಗುತ್ತಿದ್ದಂತೆಯೇ ಬಹುತೇಕ ಜನರಿಗೆ ಅದರ ಅಮಲಿನಲ್ಲಿ ಏನು ಮಾಡುತ್ತಿದ್ದೇವೆ ಎಂಬ ಪರಿವೆಯೇ ಇರುವುದಿಲ್ಲ. ಹೀಗೆ ಮದ್ಯಪಾನ ಮಾಡಿ ಬೀದಿಬೀದಿಗಳಲ್ಲಿ, ರಸ್ತೆಗಳಲ್ಲಿ ರಂಪಾಟ ಮಾಡುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ.

ಇಂತಹವರ ಪಟ್ಟಿಯಲ್ಲಿ ಈಗ ಯುವತಿಯೊಬ್ಬಳ ರಂಪಾಟ ಸೇರಿಕೊಂಡಿದೆ. ನವಿ ಮುಂಬೈನಲ್ಲಿ ಗುಂಡು ಹಾಕಿದ ಯುವತಿಯೊಬ್ಬಳು ರಸ್ತೆಯಲ್ಲಿ ರಂಪಾಟ ಮಾಡಿ ಪೊಲೀಸ್ ಅಧಿಕಾರಿ ಮತ್ತು ಕ್ಯಾಬ್ ಚಾಲಕನ ಮೇಲೆ ಹರಿಹಾಯ್ದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕಣ್ಣೆದುರೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಗರ್ಭಿಣಿ ಪತ್ನಿ ಎದುರಲ್ಲೇ ವ್ಯಕ್ತಿಯ ಬರ್ಬರ ಹತ್ಯೆ

ಮುಂಬೈನಲ್ಲಿ ತಡರಾತ್ರಿ ಪಾರ್ಟಿಗೆ ಹೋಗಿ ಕಂಠಪೂರ್ತಿ ಕುಡಿದಿದ್ದ ಯುವತಿಯು ತನ್ನ ಇಬ್ಬರು ಸ್ನೇಹಿತರೊಂದಿಗೆ ಓಲಾ ಕ್ಯಾಬ್ ಬುಕ್ ಮಾಡಿ ಅದರಲ್ಲಿ ಪ್ರಯಾಣಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಕುಡಿದು ಫುಲ್ ಚಿತ್ತಾಗಿದ್ದ ಈಕೆ ಇದ್ದಕ್ಕಿದ್ದಂತೆ ಕ್ಯಾಬ್ ಚಾಲಕನೊಂದಿಗೆ ಜಗಳ ಶುರು ಮಾಡಿದ್ದಾಳೆ. ಆತನನ್ನು ನಿಂದಿಸಿದ್ದಾಳೆ. ಇಷ್ಟೇ ಅಲ್ಲದೇ, ಚಾಲಕನನ್ನು ಕಾರಿನಿಂದ ಹೊರಗೆ ತಳ್ಳುವ ಪ್ರಯತ್ನವನ್ನೂ ಮಾಡಿದ್ದಾಳೆ.

ಕಾರನ್ನು ನಿಲ್ಲಿಸಿ ರಸ್ತೆ ಮಧ್ಯದಲ್ಲಿಯೇ ಜಗಳ ಮಾಡುತ್ತಿದ್ದಳು. ಇದನ್ನು ಗಮನಿಸಿ ಹತ್ತಿರ ಬಂದ ಪೊಲೀಸರ ಕುತ್ತಿಗೆ ಪಟ್ಟಿಯನ್ನಿಡಿದು ಅವರಿಗೂ ಬೆದರಿಕೆ ಹಾಕಿದ್ದಾಳೆ. ಇಷ್ಟಕ್ಕೂ ಸುಮ್ಮನಾಗದ ಯುವತಿ ರಸ್ತೆ ಮಧ್ಯದಲ್ಲೇ ಮಲಗುವಂತೆ ನಾಟಕವಾಡಿ ಹಾದಿ ರಂಪ ಬೀದಿ ರಂಪ ಮಾಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದ 11 ವಿಡಿಯೋಗಳನ್ನು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಅಂದ ಹಾಗೆ ವರದಿಗಳ ಪ್ರಕಾರ ಈ ಘಟನೆ ನಡೆದಿರುವುದು ಮಾರ್ಚ್ 25, 2022 ರಂದು. ಘಟನೆಗೆ ಸಂಬಂಧಿಸಿದಂತೆ ಯುವತಿ ಮತ್ತು ಆಕೆಯ ಇಬ್ಬರು ಸ್ನೇಹಿತೆಯರ ವಿರುದ್ಧ ದೂರು ದಾಖಲಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...