ಅಮೃತಸರ: ಭಾರತೀಯ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ವಿವಾಹ ಸಮಾರಂಭಗಳಲ್ಲಿನ ನೃತ್ಯ ಪ್ರದರ್ಶನಗಳು, ಮದುವೆಯ ಬಟ್ಟೆಗಳು, ವಧುವಿನ ಪ್ರವೇಶ ಮತ್ತು ವಿವಾಹಗಳಿಂದ ಪ್ರಣಯ ಅಥವಾ ತಮಾಷೆಯ ಕ್ಷಣಗಳು… ಹೀಗೆ ಹಲವು ರಸವತ್ತಾದ ವಿಡಿಯೋ ವೈರಲ್ ಆಗುತ್ತವೆ. ಇದೀಗ ಪಂಜಾಬಿ ವಿವಾಹದ ವಿಡಿಯೋ ಒಂದು ವೈರಲ್ ಆಗಿದೆ.
ಇಬ್ಬರು ವೃದ್ಧರು ಯಾರ್ ಬೋಲ್ಡಾ ಹಾಡಿಗೆ ಭಾಂಗ್ರಾ ನೃತ್ಯ ಮಾಡುವ ವಿಡಿಯೋ ಇದಾಗಿದೆ. ತಮ್ಮ ವಯಸ್ಸನ್ನು ಮರೆತು ಈ ಇಬ್ಬರು ಹಾಡಿಗೆ ಅದ್ಭುತವಾಗಿ ಸ್ಟೆಪ್ ಹಾಕಿದ್ದು, ಇದು ನೆಟ್ಟಿಗರ ಹೃದಯ ಗೆದ್ದಿದೆ. ನೃತ್ಯಕ್ಕೆ ವಯಸ್ಸಿನ ಹಂಗು ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಆಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇಬ್ಬರು ಸಿಖ್ ಪುರುಷರು ಡ್ಯಾನ್ಸ್ ಫ್ಲೋರ್ನಲ್ಲಿ ಹಾಕಿರುವ ಈ ಹೆಜ್ಜೆಯನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಪಿಂಕ್ ಪ್ಯಾಂಥರ್ ಸ್ಟುಡಿಯೋಸ್ ಎಂಬ ಪುಟ ಹಂಚಿಕೊಂಡಿದ್ದು, ಈ ವಿಡಿಯೋ ಅನ್ನು ಇದಾಗಲೇ 1 ಮಿಲಿಯನ್ಗೂ ಅಧಿಕ ಮ ನೋಡಿದ್ದು, 84 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.