alex Certify ಅಜ್ಜನ ಬೊಂಬಾಟ್ ಕುಣಿತ; ಎನರ್ಜಿ ನೋಡಿ ದಂಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜನ ಬೊಂಬಾಟ್ ಕುಣಿತ; ಎನರ್ಜಿ ನೋಡಿ ದಂಗಾದ ನೆಟ್ಟಿಗರು

ಸೂಟುಬೂಟುಧಾರಿ ವಯೋ ವೃದ್ಧರೊಬ್ಬರು ತಮ್ಮೆಲ್ಲ ಜಂಜಡ ಮರೆತು ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಪ್ಪು ಸೂಟ್​ ಧರಿಸಿದ 82 ವರ್ಷದ ವ್ಯಕ್ತಿ, ‘ಅಭಿ ತೋ ಪಾರ್ಟಿ ಶುರು ಹುಯಿ ಹೈ’ ಎಂಬ ಹಿಟ್​ ಹಾಡಿಗೆ ಡ್ಯಾನ್ಸ್​ ಮಾಡಿದ್ದು, ವಯಸ್ಸು ಕೇವಲ ಒಂದು ಸಂಖ್ಯೆ ಎಂಬ ಮಾತಿಗೆ ಜೀವಂತ ಉದಾಹರಣೆಯಾಗಿ ಕಾಣಿಸಿದ್ದಾರೆ.

ಅವರು ತಾವೆಷ್ಟು ತಮ್ಮ ನೃತ್ಯವನ್ನು ಆನಂದಿಸುತ್ತಿದ್ದಾರೆ ಎಂಬುದು ಅಲ್ಲಿ ಗಮನಾರ್ಹ ಸಂಗತಿ. ಅವರೊಟ್ಟಿಗೆ ಇನ್ನೊಬ್ಬ ಮಹಿಳೆ ಕೂಡ ಸ್ಟೆಪ್​ ಹಾಕುತ್ತಿದ್ದು, ಅದು ಅವರ ಹೆಂಡತಿ ಎಂಬಂತೆ ತೋರುತ್ತದೆ.

ನೀಗಮ್​ ಪಟೇಲ್​ ಎಂಬುವರು ಈ ವಿಡಿಯೋ ಕ್ಲಿಪ್​ ಅನ್ನು ಹಂಚಿಕೊಂಡಿದ್ದು, ವಿಡಿಯೋದ ನಡುವೆ ಕಾಣಿಸಿಕೊಳ್ಳುವ ವ್ಯಕ್ತಿ, ಇದು ಅಂತಿಮ ಸುತ್ತು‌ ! ಗೋಲ್ಡನ್​ ಬಜರ್ ​!!! ಎಂದು ಹುರಿದುಂಬಿಸುವುದು ಕಾಣಿಸುತ್ತದೆ.

ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಹಾರ್ಟ್​ ಸಿಂಬಲ್​ನೊಂದಿಗೆ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...