ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 2021 ರ ಸೂಪರ್ ಹಿಟ್ ಚಲನಚಿತ್ರ ಶೇರ್ಷಾದ ಕೆಲವು ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಾಗಿ ಉಳಿದಿದೆ. ರಾತನ್ ಲಂಬಿಯಾನ್ ಮತ್ತು ರಾಂಝಾ ಇವೆರಡು ರೊಮಾಂಟಿಕ್ ಹಾಡುಗಳನ್ನು ಜನರು ಗುನಗುನಿಸುತ್ತಿದ್ದಾರೆ, ಈ ಹಾಡನ್ನು ಕೇಳಲು ಸದಾ ಇಷ್ಟ ಪಡುವ ದೊಡ್ಡ ವರ್ಗವೇ ಇದೆ.
ಬೀದಿಬದಿಯಲ್ಲಿ ಕುಳಿತ ಯುವಕನೊಬ್ಬ ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿ ಒಂದು ಮೂಲೆಯಲ್ಲಿ ಕುಳಿತು ಇದೇ ಹಾಡಿಗೆ ಗಿಟಾರ್ ನುಡಿಸುತ್ತಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇದೇ ಸಮಯದಲ್ಲಿ ದಾರಿಹೋಕರೊಬ್ಬರು ಬಂದು ಮನ್ ಭಾರ್ಯಾ ಅವರ ಹಾಡನ್ನು ಹಾಡಿದರು. ಆ ಯುವಕ ಅವರ ಹಾಡಿಗೆ ಅಷ್ಟೇ ಸುಂದರವಾಗಿ ಗಿಟಾರ್ ನುಡಿಸಿದ. ಈ ಜೋಡಿಯ ಸಂಗೀತ ಕೇಳಲು ಬೀದಿಯಲ್ಲಿ ಹೋಗುವವರ ನಿಂತು ಆಲಿಸಿ ಸಂತೋಷ ಪಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
‘abaan_ali_47’ ಬಳಕೆದಾರರು ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ನೆಟ್ಟಿಗರು ಇದಕ್ಕೆ ಫಿದಾ ಆಗಿದ್ದಾರೆ. ಇಂಥ ಒಬ್ಬ ಸಂಗೀತ ಕಲಾವಿದನಿಗೆ ಪ್ರೋತ್ಸಾಹ ನೀಡಿ ಸೂಕ್ತ ವೇದಿಕೆ ಕಲ್ಪಿಸಬೇಕು ಎನ್ನುವುದು ನೆಟ್ಟಿಗರ ಅಭಿಮತ.