alex Certify ಡಾನ್ಸ್‌ ಮೂಲಕ ಟ್ರಾಫಿಕ್​ ಕಂಟ್ರೋಲ್; ಜನರ ಮನಗೆದ್ದಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್‌ ಮೂಲಕ ಟ್ರಾಫಿಕ್​ ಕಂಟ್ರೋಲ್; ಜನರ ಮನಗೆದ್ದಿದೆ ಈ ವಿಡಿಯೋ

ಉತ್ತರಾಖಂಡದಲ್ಲಿ ಟ್ರಾಫಿಕ್​ ಕಂಟ್ರೋಲ್​ಗೆ ನಿಯೋಜಿಸಲಾದ ಗೃಹ ರಕ್ಷಕ ದಳವು ವಿಶಿಷ್ಟ ಶೈಲಿಯಲ್ಲಿ ಟ್ರಾಫಿಕ್​ ಅನ್ನು ನಿರ್ವಹಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವೈರಲ್​ ಆಗುತ್ತಿದೆ.

ಜೋಗೇಂದ್ರ ಕುಮಾರ್​ ಎಂದು ಗುರುತಿಸಲಾದ ಸಂಚಾರ ನಿಯಂತ್ರಕ ಸಿಬ್ಬಂದಿ ಡೆಹ್ರಾಡೂನ್​ನಲ್ಲಿರುವ ಸಿಟಿ ಹಾರ್ಟ್​ ಹಾಸ್ಪಿಟಲ್​ ಬಳಿ ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದರು.

ವಿಡಿಯೊದಲ್ಲಿ, ಆತ ಡ್ಯಾನ್ಸ್​ ಮಾಡುತ್ತಾ ರಸ್ತೆಯಲ್ಲಿ ದಾಟಿ ಹೋಗುವ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಶಿಳ್ಳೆ ಹೊಡೆಯುವುದು ಮತ್ತು ಸನ್ನೆ ಮಾಡುವುದನ್ನು ಕಾಣಬಹುದು. ನಗು ಮುಖದ ಅವರ ಸೇವೆಯನ್ನು ಕಂಡು ಪ್ರಯಾಣಿಕರೂ ಹಾರೈಸುವುದು ಸಹ ವಿಡಿಯೋದಲ್ಲಿ ಕಾಣಿಸುತ್ತದೆ.

ಟ್ರಾಫಿಕ್​ ಸಿಗ್ನಲ್​ಗಳಲ್ಲಿ ಜನರು ನಿಂತಾಗ ಬೇಸರವಾಗಬಾರದು ಎಂದು ಖಚಿತಪಡಿಸಿಕೊಳ್ಳಲು ನಾನು ಇದನ್ನು ಮಾಡಿದ್ದೇನೆ. ನಾನು ನನ್ನ ಕೆಲಸವನ್ನು ಆನಂದಿಸುತ್ತೇನೆ ಎಂದು ಜೋಗೇಂದ್ರ ಕುಮಾರ್​ ಹೇಳಿಕೊಂಡಿದ್ದಾರೆ.

ನೆಟ್ಟಿಗರನೇಕರು ಈ ಗೃಹ ರಕ್ಷ ದಳ ಸಿಬ್ಬಂದಿಯ ಕಾರ್ಯಶೈಲಿಯನ್ನು ಮೆಚ್ಚಿ ಕಾಮೆಂಟ್​ ಮಾಡಿದ್ದಾರೆ. ಒಂದೇ ಕಡೆ ನಿಲ್ಲದೇ ನಿರಂತರ ಕ್ರಿಯಾಶೀಲವಾಗಿ ಕಾಣಿಸಿಕೊಳ್ಳುವುದನ್ನು ನೆಟ್ಟಿಗರು ಮೆಚ್ಚಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...