ಉತ್ತರಾಖಂಡದಲ್ಲಿ ಟ್ರಾಫಿಕ್ ಕಂಟ್ರೋಲ್ಗೆ ನಿಯೋಜಿಸಲಾದ ಗೃಹ ರಕ್ಷಕ ದಳವು ವಿಶಿಷ್ಟ ಶೈಲಿಯಲ್ಲಿ ಟ್ರಾಫಿಕ್ ಅನ್ನು ನಿರ್ವಹಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗುತ್ತಿದೆ.
ಜೋಗೇಂದ್ರ ಕುಮಾರ್ ಎಂದು ಗುರುತಿಸಲಾದ ಸಂಚಾರ ನಿಯಂತ್ರಕ ಸಿಬ್ಬಂದಿ ಡೆಹ್ರಾಡೂನ್ನಲ್ಲಿರುವ ಸಿಟಿ ಹಾರ್ಟ್ ಹಾಸ್ಪಿಟಲ್ ಬಳಿ ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದರು.
ವಿಡಿಯೊದಲ್ಲಿ, ಆತ ಡ್ಯಾನ್ಸ್ ಮಾಡುತ್ತಾ ರಸ್ತೆಯಲ್ಲಿ ದಾಟಿ ಹೋಗುವ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಶಿಳ್ಳೆ ಹೊಡೆಯುವುದು ಮತ್ತು ಸನ್ನೆ ಮಾಡುವುದನ್ನು ಕಾಣಬಹುದು. ನಗು ಮುಖದ ಅವರ ಸೇವೆಯನ್ನು ಕಂಡು ಪ್ರಯಾಣಿಕರೂ ಹಾರೈಸುವುದು ಸಹ ವಿಡಿಯೋದಲ್ಲಿ ಕಾಣಿಸುತ್ತದೆ.
ಟ್ರಾಫಿಕ್ ಸಿಗ್ನಲ್ಗಳಲ್ಲಿ ಜನರು ನಿಂತಾಗ ಬೇಸರವಾಗಬಾರದು ಎಂದು ಖಚಿತಪಡಿಸಿಕೊಳ್ಳಲು ನಾನು ಇದನ್ನು ಮಾಡಿದ್ದೇನೆ. ನಾನು ನನ್ನ ಕೆಲಸವನ್ನು ಆನಂದಿಸುತ್ತೇನೆ ಎಂದು ಜೋಗೇಂದ್ರ ಕುಮಾರ್ ಹೇಳಿಕೊಂಡಿದ್ದಾರೆ.
ನೆಟ್ಟಿಗರನೇಕರು ಈ ಗೃಹ ರಕ್ಷ ದಳ ಸಿಬ್ಬಂದಿಯ ಕಾರ್ಯಶೈಲಿಯನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಒಂದೇ ಕಡೆ ನಿಲ್ಲದೇ ನಿರಂತರ ಕ್ರಿಯಾಶೀಲವಾಗಿ ಕಾಣಿಸಿಕೊಳ್ಳುವುದನ್ನು ನೆಟ್ಟಿಗರು ಮೆಚ್ಚಿದ್ದಾರೆ.