
ವೃದ್ಧ ಹಾಗೂ ವಿದೇಶಿಗ, ರಸ್ತೆಯ ಬದಿಯಲ್ಲಿ ಸಲ್ಮಾನ್ ಖಾನ್-ಕಾಜೋಲ್ ಅಭಿನಯದ ಪ್ಯಾರ್ ಕಿಯಾ ತೋ ಡರ್ನಾ ಕ್ಯಾದ, ಓ ಓ ಜಾನೇ ಜಾನಾಗೆ ನೃತ್ಯ ಮಾಡಿದ್ದಾರೆ. ಇವರ ನೃತ್ಯಕ್ಕೆ ಜನಸಮೂಹ ಸೇರಿದ್ದು, ಇವರಿಬ್ಬರು ಕುಣಿಯುವುದನ್ನು ನೋಡಿ ಆನಂದಿಸಿದ್ದಾರೆ.
ವಿದೇಶಿಗ ಹಾಡಿನ ಲಯಕ್ಕೆ ತಕ್ಕ ಹಾಗೆ ನೃತ್ಯ ಮಾಡಿದ್ದರೆ, ವೃದ್ಧ ವ್ಯಕ್ತಿಯು ಆನಂದಿಸುತ್ತಾ ನರ್ತಿಸಿದ್ದಾರೆ. ಅಲ್ಲದೆ ಸಖತ್ತಾಗಿ ಸ್ಟೆಪ್ ಕೂಡ ಹಾಕಿದ್ದಾರೆ. ಕುಣಿದು ಕುಪ್ಪಳಿಸಿದ ಬಳಿಕ ವಿದೇಶಿಗ ವೃದ್ಧ ವ್ಯಕ್ತಿಗೆ ಕೈ ಕುಲುಕಿದ್ದು, ಅವರನ್ನು ಪ್ರೋತ್ಸಾಹಿಸಿದ್ದಾನೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ದಾದಾಜಿ (ವೃದ್ಧ ವ್ಯಕ್ತಿ) ಅವರ ಅದ್ಭುತ ನೃತ್ಯ ಕಂಡ ನೆಟ್ಟಿಗರು ಮನಸೋತಿದ್ದಾರೆ. ನಿಮ್ಮ ನೃತ್ಯವನ್ನು ಹೀಗೆಯೇ ಮುಂದುವರೆಸಿ ತಾತಾ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.