alex Certify ಬೆಂಕಿಯ ಕೆನ್ನಾಲಿಗೆಯಿಂದ ಮಗನನ್ನು ರಕ್ಷಿಸಲು ಕಠೋರ ನಿರ್ಧಾರ ಕೈಗೊಂಡ ತಂದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಕಿಯ ಕೆನ್ನಾಲಿಗೆಯಿಂದ ಮಗನನ್ನು ರಕ್ಷಿಸಲು ಕಠೋರ ನಿರ್ಧಾರ ಕೈಗೊಂಡ ತಂದೆ…!

ಬೆಂಕಿಯಿಂದ ತನ್ನ ಮೂರು ವರ್ಷದ ಮಗುವನ್ನು ಎರಡನೇ ಮಹಡಿಯಿಂದ ಕೆಳಕ್ಕೆ ಎಸೆಯುವ ಎದೆಝಲ್ ಎನಿಸುವ ವಿಡಿಯೋ ವೈರಲ್ ಆಗಿದೆ. ಅಮೇರಿಕದ ನ್ಯೂಜೆರ್ಸಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ವೇಗವಾಗಿ ಹಬ್ಬುತ್ತಿದ್ದ ಬೆಂಕಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ರಕ್ಷಣೆಗಾಗಿ ತನ್ನ ಚಿಕ್ಕ ಮಗನನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದತ್ತ ಎಸೆದಿದ್ದು, ನಂತರ ಆ ವ್ಯಕ್ತಿಯನ್ನು ಸಹ ರಕ್ಷಿಸುವ ವಿಡಿಯೋ ವೈರಲ್ ಆಗಿದೆ.

ಸೌತ್ ಬ್ರನ್ಸ್‌ವಿಕ್‌ನ ಸೌತ್ ರಿಡ್ಜ್ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ 8:15 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಹಿಂಭಾಗದ ಎರಡನೇ ಮತ್ತು ಮೂರನೇ ಮಹಡಿಯಿಂದ ಜ್ವಾಲೆ ಕಾಣಿಸಿದೆ.‌

ದೇವರೇ ನನ್ನ ತಾಯಿಯನ್ನು ಬದಲಿಸು ಎಂದು ಹಠ ಹಿಡಿದ ಮಗು, ಜನರ ನಗೆಗಡಲಲ್ಲಿ ತೇಲಿಸಿದ ವಿಡಿಯೋ ವೈರಲ್

ಬೆಂಕಿಯ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಸಿಬ್ಬಂದಿ ಅಲ್ಲಿಗೆ ಆಗಮಿಸಿದ್ದಾರೆ. ಮಗುವಿನೊಂದಿಗೆ ರಕ್ಷಣೆಗೆ ಹಾತೊರೆಯುತ್ತಿದ್ದ ವ್ಯಕ್ತಿಯನ್ನು ಕಂಡ ಅಧಿಕಾರಿಗಳು ಮಗುವನ್ನು ತಮ್ಮ‌ಕೈಗೆ ಹಾಕುವಂತೆ ಸೂಚಿಸಿದರು. ಆ ಪ್ರಕಾರ ಆತನು ಮಗುವನ್ನು ಆತ ಎರಡನೇ ಮಹಡಿಯಿಂದ ಕೆಳಕ್ಕೆ ಬಿಡುತ್ತಾನೆ. ಬಾಡಿ ಕ್ಯಾಮರಾದಲ್ಲಿ ರಕ್ಷಣಾ ಪ್ರಕ್ರಿಯೆ ಸೆರೆಯಾಗಿದೆ.

ತಂದೆ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಿದ್ದು, ತಕ್ಷಣ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಈ ಘಟನೆಯಲ್ಲಿ ಐವತ್ತು ಜನರು ಉಸಿರಾಟದ ಸಮಸ್ಯೆ ಎದುರಿಸಿದ್ದರು. ನಂತರ ಅವರಿಗೆ ಚಿಕಿತ್ಸೆ ನೀಡಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...