ಮದುವೆಗಳಿಗೆ ಬಸ್ಗಳನ್ನು ಬುಕ್ ಮಾಡುವುದು ಗೊತ್ತು. ಆದರೆ ಇಲ್ಲೊಂದು ಕುಟುಂಬ ಇಡೀ ವಿಮಾನವನ್ನೇ ಬುಕ್ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ ಬಳಕೆದಾರರಾಗಿರುವ ಶ್ರೇಯಾ ಷಾ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಸಹೋದರಿಯ ಮದುವೆಗಾಗಿ ಸಂಪೂರ್ಣ ವಿಮಾನವನ್ನು ಬುಕ್ ಮಾಡಿರುವುದಾಗಿ ಇವರು ವಿಡಿಯೋದಲ್ಲಿ ಹೇಳಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ನಲ್ಲಿ ಮದುವೆ ನಡೆಯುತ್ತಿದ್ದು, ಇದಕ್ಕಾಗಿ ಇಡೀ ವಿಮಾನ ಬುಕ್ ಮಾಡಿರುವುದಾಗಿ ಆಕೆ ಹೇಳಿದ್ದಾರೆ. ವಿಮಾನದಲ್ಲಿ ಎಲ್ಲರೂ ಖುಷಿಯಿಂದ ಮೋಜು ಮಸ್ತಿಮಾಡುವುದನ್ನು ನೋಡಬಹುದು.