‘ನಿಜವಾದ ಕಲಾವಿದನಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯ ಅಗತ್ಯವಿಲ್ಲ, ಅವನು ಎಲ್ಲಿದ್ದರೂ ಮಿಂಚುತ್ತಾನೆ.’ ಅದಕ್ಕೆ ಈ ಬಾಣಸಿಗನ ಅದ್ಭುತ ಕಲೆ ಸಾಕ್ಷಿಯಾಗಿದೆ. ಬಾಣಸಿಗನೊಬ್ಬ ಕಲ್ಲಂಗಡಿ ಹಣ್ಣಿನ ಮೇಲೆ ಅದ್ಭುತ ಕಲಾಕೃತಿ ರಚಿಸಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಬಾಣಸಿಗ ಅಂಕಿತ್ ಬಾಗಿಯಾಲ್ ಕೇವಲ ಹರಿತವಾದ ಚಾಕುವಿನಿಂದ ಕಲ್ಲಂಗಡಿ ಹಣ್ಣಿನ ಮೇಲೆ ಭಾವಚಿತ್ರವನ್ನು ಕೆತ್ತುವ ಪ್ರತಿಭೆಯನ್ನು ಹೊಂದಿದ್ದಾರೆ. ಅವರ ಅದ್ಭುತ ಪ್ರತಿಭೆಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ.
ಅಂಕಿತ್ ಯಾವಾಗಲೂ ನಡೆಯುತ್ತಿರುವ ಈವೆಂಟ್ ಆರಿಸಿಕೊಳ್ಳುತ್ತಾರೆ ಮತ್ತು ಅದರ ಸುತ್ತಲೂ ಕಲಾಕೃತಿಗಳನ್ನು ರಚಿಸುತ್ತಾರೆ. ಉದಾಹರಣೆಗೆ, ಅವರು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮೊದಲ ಮರಣ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು. ಇತ್ತೀಚೆಗೆ, ಬಾಗಿಯಾಲ್ ಮಹಾಕಾವ್ಯ ರಾಮಾಯಣ ಪಾತ್ರಗಳನ್ನು ಕೆತ್ತುತ್ತಿದ್ದಾರೆ, ಪ್ರಭಾಸ್ ಭಗವಾನ್ ರಾಮನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ʼಆದಿಪುರುಷ್ʼ ಬಿಡುಗಡೆಯನ್ನು ಉಲ್ಲೇಖಿಸಿ ಚಿತ್ರ ಬಿಡಿಸಿದ್ದಾರೆ.
ಇತ್ತೀಚೆಗೆ ಕಲ್ಲಂಗಡಿ ಹಣ್ಣಿನ ಮೇಲೆ ಹನುಮಂತನ ಮೋಡಿಮಾಡುವ ಚಿತ್ರವನ್ನು ಕೆತ್ತಿದ್ದಾರೆ. “ಜೈ ಶ್ರೀ ರಾಮ್, ಜೈ ಬಜರಂಗಬಲಿ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಹಂಚಿಕೊಂಡ ನಂತರ, ಕ್ಲಿಪ್ 5.8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು 5,83,722 ಕ್ಕೂ ಹೆಚ್ಚು ಇಷ್ಟಗಳನ್ನು ಸ್ವೀಕರಿಸಿದೆ.