alex Certify ಜಿಮ್‍ನಲ್ಲಿ ವರ್ಕೌಟ್ ಮಾಡಿದ ಬೆಕ್ಕು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಮ್‍ನಲ್ಲಿ ವರ್ಕೌಟ್ ಮಾಡಿದ ಬೆಕ್ಕು: ವಿಡಿಯೋ ವೈರಲ್

ಕೊರೊನಾ ಕಾಲಿಟ್ಟ ಮೇಲೆ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅದೆಷ್ಟೋ ಜನರು ಮನೆಯ ಹತ್ತಿರದ ಅಂಗಡಿಗೆ ಹೋಗಲು ಕೂಡ ಉದಾಸೀನ ಮಾಡುತ್ತಾರೆ. ಕನಿಷ್ಠ ವ್ಯಾಯಾಮ ಕೂಡ ಮಾಡದೆ ಸೋಮಾರಿಯಾಗಿಬಿಟ್ಟಿದ್ದಾರೆ. ಹೀಗಾಗಿ ಹಲವರಿಗೆ ದಪ್ಪ ಆಗಿರುವ ಚಿಂತೆ ಆಗಿದೆ. ಮತ್ತೆ ನಿಮಗೆ ವ್ಯಾಯಾಮ ಮಾಡಬೇಕು ಅಂತಾ ಅನಿಸಿದ್ರೆ ಈ ವಿಡಿಯೋ ನೋಡಿ, ಬಹುಶಃ ನಿಮಗೂ ಸ್ಪೂರ್ತಿಯಾಗದೆ ಇರಲಾರದು..!

ಹೌದು, ಜಿಮ್‌ನಲ್ಲಿ ಬೆಕ್ಕೊಂದು ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡುತ್ತಿದ್ರೆ ಬೆಕ್ಕು ತನ್ನ ಹೊಟ್ಟೆ ಕರಗಿಸಲು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ರೀತಿಯಾಗಿ ತೋರುತ್ತಿದೆ. ಮನುಷ್ಯರಂತೆ ಬೆಕ್ಕು ಕೂಡ ಕ್ರಂಚಸ್ ಹಾಗೂ ಸಿಟ್ ಅಪ್ ಗಳನ್ನು ಮಾಡುತ್ತಿರುವ ದೃಶ್ಯ ನೋಡುಗರನ್ನು ನೆಬ್ಬೆರಗಾಗಿಸಿದೆ.

ಚೀನಾದ ಜಿನಿಂಗ್ ನಗರದಲ್ಲಿನ ಜಿಮ್ ಒಂದರಲ್ಲಿ ಈ ದೃಶ್ಯ ಕಂಡು ಬಂದಿದೆ ಎಂದು ಹೇಳಲಾಗಿದೆ. ಬೆಕ್ಕಿನ ಮಾಲೀಕರು ಈ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಬೆಕ್ಕಿನ  ಜಿಮ್ ವರ್ಕೌಟ್ ದೃಶ್ಯದ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ.

— jass? (@anu2181) December 8, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...