![](https://kannadadunia.com/wp-content/uploads/2021/12/34427308-0-image-m-13_1602761978540.jpg)
ಹೌದು, ಜಿಮ್‌ನಲ್ಲಿ ಬೆಕ್ಕೊಂದು ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡುತ್ತಿದ್ರೆ ಬೆಕ್ಕು ತನ್ನ ಹೊಟ್ಟೆ ಕರಗಿಸಲು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ರೀತಿಯಾಗಿ ತೋರುತ್ತಿದೆ. ಮನುಷ್ಯರಂತೆ ಬೆಕ್ಕು ಕೂಡ ಕ್ರಂಚಸ್ ಹಾಗೂ ಸಿಟ್ ಅಪ್ ಗಳನ್ನು ಮಾಡುತ್ತಿರುವ ದೃಶ್ಯ ನೋಡುಗರನ್ನು ನೆಬ್ಬೆರಗಾಗಿಸಿದೆ.
ಚೀನಾದ ಜಿನಿಂಗ್ ನಗರದಲ್ಲಿನ ಜಿಮ್ ಒಂದರಲ್ಲಿ ಈ ದೃಶ್ಯ ಕಂಡು ಬಂದಿದೆ ಎಂದು ಹೇಳಲಾಗಿದೆ. ಬೆಕ್ಕಿನ ಮಾಲೀಕರು ಈ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಬೆಕ್ಕಿನ ಜಿಮ್ ವರ್ಕೌಟ್ ದೃಶ್ಯದ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ.