alex Certify ಭಾವಪೂರ್ಣ ಸ್ಟೆಪ್‌ಗಳೊಂದಿಗೆ ಮಂಟಪಕ್ಕೆ ಮದುಮಗಳ‌ ಗ್ರಾಂಡ್ ಎಂಟ್ರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವಪೂರ್ಣ ಸ್ಟೆಪ್‌ಗಳೊಂದಿಗೆ ಮಂಟಪಕ್ಕೆ ಮದುಮಗಳ‌ ಗ್ರಾಂಡ್ ಎಂಟ್ರಿ…!

ಮದುಮಗಳ ಸೂಪರ್‌ ರೊಮ್ಯಾಂಟಿಕ್ ಎಂಟ್ರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ, ಬಹಳ ಮದುವೆ ಹೆಣ್ಣುಗಳು ತಮ್ಮ ಮದುವೆ ಸಂದರ್ಭದಲ್ಲಿ ವಿಶಿಷ್ಟವಾಗಿ ಎಂಟ್ರಿ ಕೊಡಲೆಂದು ಡಿಫರೆಂಟ್ ಆಗಿ ನೃತ್ಯಗಳನ್ನು ಮಾಡುವ ಅನೇಕ ವಿಡಿಯೋಗಳನ್ನು ನೋಡುತ್ತಿರುತ್ತೇವೆ.

ಬ್ಯಾಂಕ್ ಸಿಬ್ಬಂದಿ ಮೇಲಿನ ಕೋಪಕ್ಕೆ ಭಾರೀ ಹಣ ಹಿಂಪಡೆದು ಲೆಕ್ಕ ಹಾಕಲು ಹೇಳಿದ ಗ್ರಾಹಕ…!

2017ರ ಚಿತ್ರ ’ಸೀಕ್ರೆಟ್ ಸೂಪರ್‌ಸ್ಟಾರ್‌’ನ ನಾಚ್ಡಿ ಫಿರಾ ಹಾಡನ್ನು ಆಯ್ಕೆ ಮಾಡಿಕೊಂಡ ಈ ಮದುಮಗಳು ಕೆಂಪು ಮತ್ತು ಹೊಂಬಣ್ಣದ ಲೆಹೆಂಗಾದಲ್ಲಿ ಮಿಂಚುತ್ತಾ ಮದುವೆ ಮನೆ ಪ್ರವೇಶಿಸಿದ್ದಾಳೆ. ಮದುಮಗಳು ಎಂಟ್ರಿ ಕೊಡುತ್ತಿದ್ದಂತೆ ಆಕೆಗೆ ಎರಡೂ ಕಡೆಗಳಿಂದ ಹೂವಿನ ಚಾದರ ಹಾಕುವ ಮೂಲಕ ಆಕೆಯ ಸಹೋದರರು ಸ್ವಾಗತಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಮಂಟಪದತ್ತ ಸಾಗುತ್ತಿರುವಂತೆ ಮದುಮಗಳು ಮಧ್ಯದಲ್ಲಿ ನಿಂತು ಹಾಡಿಗೆ ಲಿಪ್‌ಸಿಂಕ್ ಮಾಡಿಕೊಂಡು ಡ್ಯಾನ್ಸ್‌ ಮಾಡುತ್ತಿರುವುದನ್ನು ನೋಡಬಹುದಾಗಿದೆ. ’ತೇರಿ ಹೋಗಯಿ ಮೇಯ್ನ್ಂ’ ಎಂದು ಹಾಡಿನ ಲಿರಿಕ್ಸ್ ಬರುತ್ತಿದ್ದಂತೆಯೇ ಮದುಮಗನತ್ತ ಮುಖ ಮಾಡಿದ ಮದುಮಗಳು ತಾನು ಇನ್ನು ಮಂದೆ ಆತನಿಗೆ ಸೇರಿದವಳು ಎಂದು ಸೂಚ್ಯವಾಗಿ ಹೇಳುತ್ತಿರುವುದನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...