ಮೇರೆ ಸೈಯಾನ್ ಸೂಪರ್ಸ್ಟಾರ್……ಹಾಡು ಚಿರಪರಿಚಿತ. 2015 ರ ಚಲನಚಿತ್ರ ಏಕ್ ಪಹೇಲಿ ಲೀಲಾದ ಈ ಹಾಡು ಇಂದಿಗೂ ಕ್ರೇಜ್ ಇಟ್ಟುಕೊಂಡಿದೆ. ತನ್ನ ಮದುವೆ ಸಮಾರಂಭದಲ್ಲಿ ವಧು ಒಬ್ಬಳು ಸುಂದರವಾಗಿ ಅಲಂಕಾರಗೊಂಡು ವರನನ್ನು ಈ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಸ್ವಾಗತಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ವರನನ್ನು ಸ್ವಾಗತಿಸುವ ಅನೇಕ ರಂಜನೀಯ ಸಂಪ್ರದಾಯವಿದೆ. ಅದರಲ್ಲಿ ನೃತ್ಯ ಮಾಡುವುದೂ ಒಂದಾಗಿದೆ. ಈ ವಿಡಿಯೋದಲ್ಲಿ ದಿಬ್ಬಣದೊಂದಿಗೆ ಮದುವೆ ನಡೆಯುವ ಸಭಾಂಗಣಕ್ಕೆ ಬಂದು ಕುಳಿತ ಸಂದರ್ಭದಲ್ಲಿ ವಧು ನೃತ್ಯ ಮಾಡುತ್ತಾ ಆತನನ್ನು ಆಹ್ವಾನಿಸುವುದನ್ನು ನೋಡಬಹುದಾಗಿದೆ.
ಸುಂದರವಾದ ಕೆಂಪು ಲೆಹೆಂಗಾವನ್ನು ಧರಿಸಿರುವ ವಧು ತನ್ನ ವರನ ಮುಂದೆ ಸೈಯಾನ್ ಸೂಪರ್ಸ್ಟಾರ್… ಹಾಡಿಗೆ ನೃತ್ಯ ಮಾಡುತ್ತಾಳೆ. ಅತಿಥಿಗಳು ವಧು ಆರತಿ ಮಹಾಜನ್ ಸ್ಟೆಪ್ ಹಾಕಿದಾಗ ಚಪ್ಪಾಳೆ ತಟ್ಟುವುದನ್ನು ಸಹ ನೋಡಬಹುದು.
ಈ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ‘ಫೋಟೋಶೂಟ್ವೆಡ್ಡಿಂಗ್’ ಪುಟವು ಹಂಚಿಕೊಂಡಿದೆ ಮತ್ತು 781ಕೆ ವೀಕ್ಷಣೆ ಮತ್ತು 38ಕೆ ಲೈಕ್ನೊಂದಿಗೆ ವೈರಲ್ ಆಗಿದೆ. ನೆಟ್ಟಿಗರು ವಧುವಿನ ಡ್ಯಾನ್ಸ್ಗೆ ಪ್ರಭಾವಿತರಾಗಿದ್ದಾರೆ ಹಾಗೂ ವರನನ್ನು ವಧು ಸ್ವತಃ ಸ್ವಾಗತಿಸುವ ವಿಶಿಷ್ಟ ವಿಧಾನದಿಂದ ಖುಷಿಗೊಂಡಿದ್ದಾರೆ.
https://www.youtube.com/watch?v=9DTJ4_2jzwM&feature=youtu.be