alex Certify ಸ್ಟೆಪ್​ ಹಾಕಿ ವರನನ್ನು ಬರಮಾಡಿಕೊಂಡ ವಧು; ನೆಟ್ಟಿಗರಿಗೆ ಮೆಚ್ಚುಗೆಯಾಗಿದೆ ಕ್ಯೂಟ್​ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟೆಪ್​ ಹಾಕಿ ವರನನ್ನು ಬರಮಾಡಿಕೊಂಡ ವಧು; ನೆಟ್ಟಿಗರಿಗೆ ಮೆಚ್ಚುಗೆಯಾಗಿದೆ ಕ್ಯೂಟ್​ ವಿಡಿಯೋ

ಭಾರತೀಯ ಸಂಪ್ರದಾಯ ಒಂದೊಂದು ಕಡೆ ಒಂದೊಂದು ರೀತಿ. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಆಗಿಬಿಟ್ಟಿದೆ. ಇಲ್ಲೊಂದು ವಿಡಿಯೋದಲ್ಲಿ ವರನನ್ನು ವಧು ನೃತ್ಯ ಮಾಡುತ್ತಾ ಸ್ವಾಗತಿಸುವ ಕ್ಯೂಟ್​ ಕ್ಯೂಟ್​ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ.

‘ತೇಷಾದಿಸ್ವಾಗ್​’ ಪೇಜ್​ ಅದ್ಭುತ ಪ್ರವೇಶ! ಎಂಬ ಶೀರ್ಷಿಕೆಯೊಂದಿಗೆ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದೆ. ಈ ರೀಲ್​ ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್​ ಆಗಿದೆ. ವಧು ತನ್ನ ಸಹೋದರರೊಂದಿಗೆ ಹಳೆಯ ಸಾಂಪ್ರದಾಯಿಕ ರೀತಿಯಲ್ಲಿ ಪ್ರವೇಶಿಸುವ ಬದಲು, ತನ್ನ ಗೆಳತಿಯರ ಗುಂಪಿನೊಂದಿಗೆ ಪ್ರವೇಶಿಸಿರುವುದು ವಿಶೇಷವಾಗಿದೆ.

ವಧು ಕೆಂಪು ಮತ್ತು ಕೆನ್ನೇರಳೆ ಬಣ್ಣದ ಡ್ರೆಸ್​ನಲ್ಲಿ ಸುಂದರವಾಗಿ ಕಾಣುತ್ತಿದ್ದರೆ ವಧುವಿನ ಗೆಳತಿಯರು ಬೆಟ್​ ಔಟ್​ ಫಿಟ್​ ಬಟ್ಟೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ದಿನ ಆ ಥೀಮ್​ ಗಮನ ಸೆಳೆಯುವಂತಿದೆ.

ಮೋಹನ್​ ಮತ್ತು ಅಭಿಜಿತ್​ ವಘಾನಿ ಅವರ ಕಿಥೆ ರೆಹ್​ ಗಯಾ ಹಾಡಿನಲ್ಲಿ ನೃತ್ಯ ಪ್ರದರ್ಶನದಲ್ಲಿ ವಧು ಸಾಂಪ್ರದಾಯಿಕ ಭಂಗಿಯೊಂದಿಗೆ ಪ್ರದರ್ಶನವನ್ನು ಕೊನೆಗೊಳಿಸಿದರು. ಇದಕ್ಕೆ ವರನ ಕಡೆಯಿಂದಲೂ ಅಷ್ಟೇ ರೀತಿ ಪ್ರತಿಕ್ರಿಯೆ ಬಂದಿದ್ದು ನೋಡುಗರ ಕಣ್ಣಿಗೆ ಹಬ್ಬವೆನಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...