ಭಾರತೀಯ ಸಂಪ್ರದಾಯ ಒಂದೊಂದು ಕಡೆ ಒಂದೊಂದು ರೀತಿ. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಆಗಿಬಿಟ್ಟಿದೆ. ಇಲ್ಲೊಂದು ವಿಡಿಯೋದಲ್ಲಿ ವರನನ್ನು ವಧು ನೃತ್ಯ ಮಾಡುತ್ತಾ ಸ್ವಾಗತಿಸುವ ಕ್ಯೂಟ್ ಕ್ಯೂಟ್ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ.
‘ತೇಷಾದಿಸ್ವಾಗ್’ ಪೇಜ್ ಅದ್ಭುತ ಪ್ರವೇಶ! ಎಂಬ ಶೀರ್ಷಿಕೆಯೊಂದಿಗೆ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಈ ರೀಲ್ ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ವಧು ತನ್ನ ಸಹೋದರರೊಂದಿಗೆ ಹಳೆಯ ಸಾಂಪ್ರದಾಯಿಕ ರೀತಿಯಲ್ಲಿ ಪ್ರವೇಶಿಸುವ ಬದಲು, ತನ್ನ ಗೆಳತಿಯರ ಗುಂಪಿನೊಂದಿಗೆ ಪ್ರವೇಶಿಸಿರುವುದು ವಿಶೇಷವಾಗಿದೆ.
ವಧು ಕೆಂಪು ಮತ್ತು ಕೆನ್ನೇರಳೆ ಬಣ್ಣದ ಡ್ರೆಸ್ನಲ್ಲಿ ಸುಂದರವಾಗಿ ಕಾಣುತ್ತಿದ್ದರೆ ವಧುವಿನ ಗೆಳತಿಯರು ಬೆಟ್ ಔಟ್ ಫಿಟ್ ಬಟ್ಟೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ದಿನ ಆ ಥೀಮ್ ಗಮನ ಸೆಳೆಯುವಂತಿದೆ.
ಮೋಹನ್ ಮತ್ತು ಅಭಿಜಿತ್ ವಘಾನಿ ಅವರ ಕಿಥೆ ರೆಹ್ ಗಯಾ ಹಾಡಿನಲ್ಲಿ ನೃತ್ಯ ಪ್ರದರ್ಶನದಲ್ಲಿ ವಧು ಸಾಂಪ್ರದಾಯಿಕ ಭಂಗಿಯೊಂದಿಗೆ ಪ್ರದರ್ಶನವನ್ನು ಕೊನೆಗೊಳಿಸಿದರು. ಇದಕ್ಕೆ ವರನ ಕಡೆಯಿಂದಲೂ ಅಷ್ಟೇ ರೀತಿ ಪ್ರತಿಕ್ರಿಯೆ ಬಂದಿದ್ದು ನೋಡುಗರ ಕಣ್ಣಿಗೆ ಹಬ್ಬವೆನಿಸುತ್ತದೆ.