ಭಾರತದಲ್ಲಿ ಪ್ರತಿಭೆಗಳಿಗೇನು ಕೊರತೆಯೇ ಇಲ್ಲ. ಈಗಂತೂ ಸಾಮಾಜಿಕ ಮಾಧ್ಯಮ ಈ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಕ್ಷಣಮಾತ್ರದಲ್ಲಿ ಖ್ಯಾತಿ ಪಡೆದುಬಿಡುತ್ತಾರೆ.
ಹುಡುಗನೊಬ್ಬ ರೈಲ್ವೆ ನಿಲ್ದಾಣದಲ್ಲಿ ಬ್ಯಾಕ್ ಫ್ಲಿಪ್ ಪ್ರದರ್ಶಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬೆರಗುಗೊಳಿಸುವಂತೆ ಆತನ ಸಾಹಸ ಅಲ್ಲಿದ್ದ ಜನರ ಹುಬ್ಬೇರುವಂತೆ ಮಾಡಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಆ ಹುಡುಗ ರೈಲ್ವೇ ನಿಲ್ದಾಣದ ಪ್ಲಾಟ್ ಫಾಮ್ರ್ನಲ್ಲಿ ಸಾಹಸ ಪ್ರದಶಿರ್ಸುತ್ತಾನೆ. ಸಾಕಷ್ಟು ಪ್ರಯಾಣಿಕರನ್ನು ಹೊಂದಿರುವ ರೈಲನ್ನು ಸಹ ಅಲ್ಲಿ ಕಾಣಬಹುದು. ಅಲ್ಲಿದ್ದವರೆಲ್ಲರೂ ಸಾಹಸವನ್ನು ವೀಕ್ಷಿಸುತ್ತಾರೆ. ಒಬ್ಬ ಪೋಲೀಸ್ ಸಹ ಈ ಸಾಹಸಕ್ಕೆ ಸಾಕ್ಷಿಯಾಗುತ್ತಾನೆ. ಆ ಹುಡುಗನ ಚುರುಕುತನ ಕಂಡು ಪ್ರಭಾವಿತನಾಗುತ್ತಾನೆ.
ಕ್ರೇಜಿ ಫ್ಲಿಪ್ಪರ್ ಎಂಬ ಹೆಸರಿನ ಕಂಟೆಂಟ್ ಕ್ರಿಯೇಟರ್ ಸೂರಜ್ ಸಿಂಗ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಬ್ಯಾಕ್ಫ್ಲಿಪ್ ಸಮಯದಲ್ಲಿ, ದೇಹವು ಗಾಳಿಯಲ್ಲಿ ಪೂರ್ಣ 360 ಡಿಗ್ರಿ ತಿರುಗುತ್ತದೆ.
ಜೂನ್ 20ರಂದು ವಿಡಿಯೋ ಹಂಚಿಕೊಂಡಾಗಿನಿಂದ 2,94,813 ಕ್ಕೂ ಹೆಚ್ಚು ಲೈಕ್ ಗಳಿಸಿದೆ. “ಸುರಕ್ಷಿತರಾಗಿರಿ ಬ್ರೋ’ ಎಂದು ಒಬ್ಬ ಬಳಕೆದಾರರು ಬರೆದರೆ ಮತ್ತೊಬ್ಬರು “ಸೂಪರ್ ಬ್ರೋ” ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಂದು ನೀವು ಈ ಸ್ಟಂಟ್ ಟ್ರೈ ಮಾಡಲು ಹೋಗಬೇಡಿ. ಇದಕ್ಕೆ ಸಾಕಷ್ಟು ತರಬೇತಿ ಬೇಕಾಗುತ್ತದೆ.