alex Certify ತೆಲುಗು ಹಾಡಿಗೆ ಯುವಜೋಡಿಯಿಂದ ಭರ್ಜರಿ ಸ್ಟೆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಲುಗು ಹಾಡಿಗೆ ಯುವಜೋಡಿಯಿಂದ ಭರ್ಜರಿ ಸ್ಟೆಪ್

ಯುವ ಜೋಡಿಯೊಂದು ಜನಪ್ರಿಯ ತೆಲುಗು ಚಲನಚಿತ್ರದ ಹಾಡಿಗೆ ನೃತ್ಯ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮುಕುಲ್​ ಗೇನ್​ ಮತ್ತು ಸೋನಾ ಡೇ, ಇನ್​ಸ್ಟಾಗ್ರಾಮ್​ ಇನ್​ಫ್ಲುಯೆನ್ಸರ್​ ಎನಿಸಿಕೊಂಡಿದು, ಮಿಲಿಯನ್​ ಫಾಲೋವರ್​ಗಳನ್ನು ಹೊಂದಿದ್ದಾರೆ. ಅವರು ಅಲ್ಲು ಅರ್ಜುನ್​ ಅಭಿನಯದ ಬನ್ನಿ ಬನ್ನಿ ಹಾಡಿನಲ್ಲಿ ಪವರ್​-ಪ್ಯಾಕ್ಡ್ ಮತ್ತು ಮನಸೆಳೆಯುವ ಸ್ಟೆಪ್​ ಹಾಕಿ ತೋರಿಸಿದ್ದಾರೆ.‌

ಕೆಂಪು ಡ್ರೆಸ್​ ತೊಟ್ಟಿದ್ದು ಸೂಪರ್​ ಎನರ್ಜಿಯೊಂದಿಗೆ ಹಾಡಿಗೆ ತಕ್ಕಂತೆ ನೃತ್ಯಮಾಡಿದ್ದಾರೆ. 2005 ರಲ್ಲಿ ಬನ್ನಿ ಚಲನಚಿತ್ರ ತೆರೆಕಂಡಿದ್ದು, ಅಲ್ಲು ಅರ್ಜುನ್​ ಜೊತೆಗೆ ಗೌರಿ ಮುಂಜಾಲ್​, ಪ್ರಕಾಶ್​ ರಾಜ್​ ನಟಿಸಿದ್ದಾರೆ.

3.7 ಮಿಲಿಯನ್​ ಫಾಲೋಯರ್​ಗಳನ್ನು ಹೊಂದಿರುವ ಸೋನಾ ಡೇ ಅವರು ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಸೌತ್​ ಸೆ ಕಾನ್​ ಕಾನ್​ ದೇಖ್​ ರೆ ಹೋ?” ಎಂದು ಶೀರ್ಷಿಕೆ ಬರೆದಿದ್ದಾರೆ.

ಒಂದು ವಾರದ ಹಿಂದೆ ಹಂಚಿಕೊಂಡ ನಂತರ, ವಿಡಿಯೊ 1,79, 200 ಲೈಕ್​ ಪಡೆದಿದೆ. ಕಾಮೆಂಟ್​ ವಿಭಾಗದಲ್ಲಿ ಸಾವಿರಾರು ಅಭಿಪ್ರಾಯಗಳು ತುಂಬಿಹೋಗಿದೆ. ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...