alex Certify ವರನ ಸಮ್ಮುಖದಲ್ಲೇ ವಧುವಿನ ಕೊರಳಿಗೆ ಮಾಲೆ ಹಾಕಿದ ಪ್ರಿಯಕರ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರನ ಸಮ್ಮುಖದಲ್ಲೇ ವಧುವಿನ ಕೊರಳಿಗೆ ಮಾಲೆ ಹಾಕಿದ ಪ್ರಿಯಕರ: ವಿಡಿಯೋ ವೈರಲ್​

ಹಿಂದೂ ಸಂಪ್ರದಾಯಗಳ ಪ್ರಕಾರ ನಡೆಯುವ ಮದುವೆಗಳು ಅಂದರೆ ಅಲ್ಲಿ ವಿನೋದ, ನಗು ಹಾಗೂ ಪ್ರೀತಿ ತುಂಬಿ ತುಳುಕುತ್ತಾ ಇರುತ್ತದೆ, ಆದರೆ ಕೆಲವೊಂದು ಕಡೆಗಳಲ್ಲಿ ಈ ಮದುವೆಗಳು ಸಿನೀಮಿಯ ರೀತಿಯಲ್ಲಿ ತಿರುವು ಪಡೆದ ಅನೇಕ ಘಟನೆಗಳನ್ನೂ ನಾವು ಕಂಡಿದ್ದೇವೆ. ಕೊನೆ ಕ್ಷಣದಲ್ಲಿ ಮದುವೆ ನಿಂತು ಹೋಗುವುದು, ವಧುವಿನ ಪ್ರಿಯಕರ ಮದುವೆಯಲ್ಲಿ ಕಾಣಿಸಿಕೊಂಡು ಕಲ್ಯಾಣ ಮಂಟಪದಲ್ಲಿ ಗಲಾಟೆ ಮಾಡುವುದು ಹೀಗೆ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇದೀಗ ನಾವು ಹೇಳಲು ಹೊರಟ ಕತೆ ಕೂಡ ಇಂತದ್ದೇ ಸಾಲಿಗೆ ಸೇರಿದ ಒಂದು ಮದುವೆಯಾಗಿದೆ.

ಬಿಹಾರದ ನಳಂದಾದಲ್ಲಿ ಇಂತದ್ದೊಂದು ಘಟನೆ ಸಂಭವಿಸಿದ್ದು ಹಾರ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿ ವಧುವಿನ ಪ್ರೇಮಿ ಮದುವೆಗೆ ಅಡ್ಡಿಪಡಿಸಿದ ಘಟನೆಯೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ವಧು ಹಾಗೂ ವರನ ಕುಟುಂಬಸ್ಥರು ಕಲ್ಯಾಣ ಮಂಟಪದಲ್ಲಿ ನೆರೆದಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಧುವಿನ ಪ್ರೇಮಿ ಪ್ರತ್ಯಕ್ಷನಾಗಿದ್ದಾನೆ. ಹಾಗೂ ವಧುವಿನ ಕುತ್ತಿಗೆಗೆ ತಾನೇ ಮಾಲೆ ಹಾಕಿದ್ದಾನೆ.

ಈ ವಿಡಿಯೋ ಎಲ್ಲರನ್ನೂ ಕೊಂಚ ಹೊತ್ತು ಮೂಕವಿಸ್ಮಿತರನ್ನಾಗಿಸಿದೆ. ಕಲ್ಯಾಣ ಮಂಟಪದಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಆತನಿಗೆ ಕಪಾಳ ಮೋಕ್ಷ ಮಾಡುತ್ತಾರೆ. ಇಷ್ಟೆಲ್ಲ ಘಟನೆ ನಡೆದರೂ ಒಂದೂ ಮಾತನ್ನೂ ಹೇಳದೇ ವಧು ಸುಮ್ಮನೇ ಇರುತ್ತಾಳೆ. ಬಳಿಕ ಆಕೆಯ ಪ್ರಿಯಕರನನ್ನು ವಧುವಿನ ಕುಟುಂಬಸ್ಥರು ಥಳಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...