alex Certify ಲೈವ್​ ಸರ್ಕಸ್​​ನಲ್ಲೇ ತರಬೇತುದಾರನ ಮೇಲೆ ಕರಡಿ ಡೆಡ್ಲಿ ಅಟ್ಯಾಕ್​: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್​ ಸರ್ಕಸ್​​ನಲ್ಲೇ ತರಬೇತುದಾರನ ಮೇಲೆ ಕರಡಿ ಡೆಡ್ಲಿ ಅಟ್ಯಾಕ್​: ವಿಡಿಯೋ ವೈರಲ್​

ಸರ್ಕಸ್​ನಲ್ಲಿದ್ದ ಕರಡಿಯೊಂದು ತನ್ನ ತರಬೇತುದಾರನ ಮೇಲೆಯೇ ದಾಳಿ ಮಾಡಿದ ಆಘಾತಕಾರಿ ಘಟನೆಯ ವಿಡಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ. ಇದು 2019ರಲ್ಲಿ ಉತ್ತರ ರಷ್ಯಾದ ಸರ್ಕಸ್​ ಪ್ರದರ್ಶನವೊಂದರಲ್ಲಿ ನಡೆದ ಘಟನೆಯಾಗಿದೆ.

ವೇದಿಕೆಯಲ್ಲೇ ಕರಡಿಯು ತನ್ನ ತರಬೇತುದಾರನ ಮೇಲೆ ಏಕಾಏಕಿ ದಾಳಿ ಮಾಡಿದ ವಿಡಿಯೋ ಇದೀಗ ಇನ್​ಸ್ಟಾಗ್ರಾಂನಲ್ಲಿ ಮತ್ತೆ ವೈರಲ್​ ಆಗ್ತಿದೆ.
ವಿಡಿಯೋದಲ್ಲಿ 600 ಪೌಂಡ್​ ತೂಕದ ಕರಡಿಯು ತರಬೇತುದಾರ ಟ್ರಿಕ್​​ ಮಾಡಲು ಮುಂದಾದಾಗ ಆತನ ಮೇಲೆಯೇ ದಾಳಿ ನಡೆಸಿದ್ದನ್ನು ಕಾಣಬಹುದಾಗಿದೆ. ಕರಡಿಯು ತರಬೇತುದಾರನ ತೋಳನ್ನು ಕಚ್ಚಿದೆ. ಆಮೇಲೆ ಆತನನ್ನು ನೆಲಕ್ಕೆ ಬಡಿದಿದೆ. ಇದನ್ನು ನೋಡಿದ ಪ್ರೇಕ್ಷಕರು ಕಿರುಚಲು ಆರಂಭಿಸಿದರು. ಮೊದಲ ಸಾಲಿನಲ್ಲಿ ಕುಳಿತವರು ಸ್ಥಳದಿಂದ ಕಾಲ್ಕೀಳುತ್ತಿರೋದನ್ನು ಕಾಣಬಹುದಾಗಿದೆ.

ವೇದಿಕೆಯಲ್ಲಿದ್ದ ಮತ್ತೊಬ್ಬ ತರಬೇತುದಾರ ಕರಡಿಯಿಂದ ಆತನನ್ನು ಕಾಪಾಡಲು ಕರಡಿಗೆ ಒದೆಯುತ್ತಿರೋದನ್ನು ಕಾಣಬಹುದಾಗಿದೆ. ಆದರೆ. ಉದ್ರೇಕಗೊಂಡಿದ್ದ ಕರಡಿಯು ಆತನ ಮೇಲೆ ದಾಳಿಯನ್ನು ಮುಂದುವರಿಸಿತ್ತು. ಬಳಿಕ ಕರಡಿಗೆ ವಿದ್ಯುತ್​ ಶಾಕ್​ ನೀಡಿ ಸೆರೆ ಹಿಡಿಯಲಾಯಿತು. ಹಾಗೂ ತರಬೇತುದಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...