alex Certify ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ತಮಾಷೆ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ತಮಾಷೆ ವಿಡಿಯೋ…!

Viral video: Monkey and toddler snatch mobile phone from each other,  uproarious video goes viral | viral News | Zee Newsಇತ್ತೀಚೆಗೆ ಪ್ರಾಣಿಗಳ ವಿಡಿಯೋಗಳು ಪ್ರತಿ ದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಕೆಲವೊಂದು ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗುವಂತಿರುತ್ತದೆ. ಅಂದಹಾಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಖಂಡಿತ ನೀವು ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ..!

ಇಂದಿನ ದಿನಗಳಲ್ಲಿ ಸಣ್ಣ ಮಕ್ಕಳೂ ಕೂಡ ಮೊಬೈಲ್ ಅಪರೇಟ್ ಮಾಡುತ್ತಾರೆ. ಮೊಬೈಲ್ ಗಾಗಿ ಹಠ ಹಿಡಿಯುತ್ತಾರೆ. ಇದೀಗ ಪುಟ್ಟ ಮಗು ಹಾಗೂ ಕೋತಿಯೊಂದು ಮೊಬೈಲ್ ಗಾಗಿ ಜಗಳವಾಡಿರುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ.

ಪುಟ್ಟ ಬಾಲಕಿಯೊಬ್ಬಳು ಮೊಬೈಲ್ ನೋಡುತ್ತಾ ಕೂತಿದ್ದರೆ, ಅಲ್ಲೇ ಇದ್ದ ಕಪಿಯೊಂದು ಮಗುವಿನ ಕೈಯಿಂದ ಮೊಬೈಲ್ ಅನ್ನು ಕಸಿದುಕೊಳ್ಳುತ್ತದೆ. ನಂತರ ಕುತೂಹಲದಿಂದ ಮೊಬೈಲ್ ಅನ್ನು ನೋಡಿದೆ. ಬಾಲಕಿ ಮೊಬೈಲ್ ಬೇಕೆಂದು ಕೈ ಚಾಚಿದ್ರೂ ಕಪಿರಾಯ ಕೊಡಲೊಪ್ಪುವುದಿಲ್ಲ. ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 1.4 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಇತ್ತೀಚೆಗೆ ಕಪಿಯೊಂದು ವ್ಯಕ್ತಿಯೊಬ್ಬನಿಂದ ಕನ್ನಡಕವನ್ನು ಕಿತ್ತುಕೊಂಡಿತ್ತು. ತನ್ನ ಕನ್ನಡಕವನ್ನು ವಾಪಸ್ ತೆಗೆದುಕೊಳ್ಳಲು ಉಪಾಯ ಹೂಡಿದ ಆತ, ಮಾವಿನಹಣ್ಣಿನ ಜ್ಯೂಸ್ ಬಾಟಲಿಯನ್ನು ಕೋತಿಗೆ ನೀಡಿದ್ದ. ಈ ವೇಳೆ ಕನ್ನಡಕವನ್ನು ಕೋತಿ ವಾಪಸ್ ಮಾಡಿತ್ತು. ಈ ವಿಡಿಯೋ ವೈರಲ್ ಆಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...