alex Certify ಜಾರು ಬಂಡೆಯಲ್ಲಿ ಮುಗ್ಗರಿಸಿದ ಆಂಟಿ; ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾರು ಬಂಡೆಯಲ್ಲಿ ಮುಗ್ಗರಿಸಿದ ಆಂಟಿ; ವಿಡಿಯೋ ವೈರಲ್​

ದೊಡ್ಡವರಿಗೂ ಮಕ್ಕಳಂತೆ ಆಟವಾಡುವ ಉಮೇದು ಅಪರೂಪಕ್ಕೆ ಬಂದುಬಿಡುತ್ತದೆ. ಹೀಗೆ ಮಹಿಳೆಯೊಬ್ಬರು ಜಾರುಬಂಡೆ ಏರಿ ತಮ್ಮ ಆಸೆ ತೀರಿಸಿಕೊಳ್ಳಲು ಪ್ರಯತ್ನಿಸಿದಾಗ ಮುಗ್ಗರಿಸಿ ಬಿದ್ದಿದ್ದಾರೆ. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಾಲ್ಯದಲ್ಲಿ ಜಾರುಬಂಡೆ ಆಡುವುದು ಮಕ್ಕಳಿಗೆ ಬಲು ಇಷ್ಟ. ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಇಷ್ಟಪಡುತ್ತಾರೆ ಮತ್ತು ಆನಂದಿಸುತ್ತಾರೆ. ವಯಸ್ಸಾದ ಮಹಿಳೆಯೊಬ್ಬರು ಜಾರುಬಂಡೆಯ ಯಲ್ಲಿ ತಮ್ಮ ಸಮಯವನ್ನು ಆನಂದಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿಕಾಣಿಸಿಕೊಂಡಿದೆ.

ಈ ವೀಡಿಯೋದಲ್ಲಿ ಮಕ್ಕಳು ಜಾರುಬಂಡೆ ಮೆಲೆ ಕುಳಿತು ಒಬ್ಬೊಬ್ಬರಾಗಿ ಕೆಳಗೆ ಜಾರುತ್ತಿರುವುದನ್ನು ಕಾಣಬಹುದು. ಆಂಟಿ ಕೂಡ ಸರದಿಯಲ್ಲಿ ನಿಂತಿದ್ದರು. ಆದರೆ ಆಕೆ ಜಾರುಬಂಡೆ ಕೆಳಭಾಗವನ್ನು ತಲುಪುತ್ತಿದ್ದಂತೆ ನಿಯಂತ್ರಣವನ್ನು ಕಳೆದುಕೊಂಡು ಮುಗ್ಗರಿಸಿ ಬೀಳುವುದು ವಿಡಿಯೋದಲ್ಲಿ ಕಾಣಬಹುದು.

ಕೆಲವು ಸೆಕೆಂಡುಗಳ ನಂತರವೇ ಆಕೆ ಮತ್ತೆ ಎದ್ದೇಳಲು ಸಾಧ್ಯವಾಗುತ್ತದೆ. ಈ ಮಧ್ಯೆ, ಅವಳ ಸುತ್ತಲಿನ ಇತರರು ವಿನೋದದಿಂದ ನಗುತ್ತಿರುವುದು ಕಾಣಿಸುತ್ತದೆ. ಇದನ್ನು ಕಂಡು ಮಹಿಳೆಗೂ ನಗು ಬರುತ್ತದೆ.

ವೀಡಿಯೊ ವೈರಲ್​ ಆಗಿದ್ದು, ನೆಟ್ಟಿಗರಿಗೂ ನಗುವುದನ್ನು ತಡೆಯಲಾಗಲಿಲ್ಲ. “ಭಾಯ್​ ಲಗ್​ ಗಯಿ ಉನ್ಹೆ ಯಾರ್​ ಯೇ ಲೋಗ್​ ಎಸಾ ರಹೇ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...