alex Certify ಲೆಹಂಗಾದಲ್ಲಿ ಮಿಂಚಿದ ಅಮೆರಿಕನ್​ ವಧು: ಕುಟುಂಬಸ್ಥರ ಖುಷಿ ಕಂಡ ನೆಟ್ಟಿಗರಿಗೂ ಸಂತಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೆಹಂಗಾದಲ್ಲಿ ಮಿಂಚಿದ ಅಮೆರಿಕನ್​ ವಧು: ಕುಟುಂಬಸ್ಥರ ಖುಷಿ ಕಂಡ ನೆಟ್ಟಿಗರಿಗೂ ಸಂತಸ

ನ್ಯೂಯಾರ್ಕ್​: ಮದುವೆ, ಸಂಪ್ರದಾಯ ಎಂದೆಲ್ಲಾ ಬಂದಾಗ ಹಲವರು ಭಾರತೀಯ ಸಂಪ್ರದಾಯಕ್ಕೆ ಮೊರೆ ಹೋಗುವುದು ಇದೆ. ವಿದೇಶಿಗರು ಕೂಡ ಭಾರತೀಯ ಸಂಪ್ರದಾಯದ ಪ್ರಕಾರವೇ ಮದುವೆಯಾಗಲು ನೋಡುತ್ತಿರುವುದು ವಿಶೇಷವೇ. ಅದೇ ರೀತಿಯ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ.

ಭಾರತೀಯ ವಧುವಿನ ವೇಷ ಧರಿಸಿದ ಅಮೆರಿಕನ್​ ಮಹಿಳೆಯ ವಿಡಿಯೋ ಇದಾಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಮೊದಲ ಬಾರಿಗೆ ಲೆಹೆಂಗಾದಲ್ಲಿ ವಧುವನ್ನು ನೋಡಿದ ಅವಳ ಇಡೀ ಕುಟುಂಬದ ಸದಸ್ಯರ ಪ್ರತಿಕ್ರಿಯೆಗಳನ್ನು ಈ ವಿಡಿಯೋದಲ್ಲಿ ಸೆರೆಯಾಗಿದ್ದು, ಅವರ ಭಾವನೆಗಳನ್ನು ವರ್ಣಿಸಲು ಪದಗಳು ಸಾಲದಾಗಿವೆ.

ಮೇಕಪ್ ಕಲಾವಿದೆ ಮತ್ತು ಹೇರ್ ಸ್ಟೈಲಿಸ್ಟ್ ಬಿಯಾಂಕಾ ಲೌಜಾಡೊ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಕೆಂಪು ಬಣ್ಣದ ಲೆಹೆಂಗಾ ಧರಿಸಿ ವಧು ತನ್ನ ಹೋಟೆಲ್ ಕೋಣೆಯಿಂದ ಹೊರಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಲೆಹಂಗಾವನ್ನು ಎರಡು ಕೈಗಳಿಂದ ಸ್ವಲ್ಪ ಮೇಲಕ್ಕೆ ಎಂದರೆ ತನ್ನ ಕಾಲಿನಡಿಗೆ ಸಿಗದೇ ಎತ್ತಿಕೊಂಡು ಹೆಜ್ಜೆ ಹಾಕಿದ ಆ ಕ್ಷಣ ಆಕೆಯ ಕುಟುಂಬದ ಸದಸ್ಯರಿಗೆ ಒಂದು ಸರ್‌ಪ್ರೈಸ್ ಆಗಿತ್ತು. ಆಕೆಯನ್ನು ನೋಡಿದ ಕುಟುಂಬ ಸದಸ್ಯರು ಚಪ್ಪಾಳೆ ತಟ್ಟಲು ಪ್ರಾರಂಭಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...