alex Certify ಬೀದಿಬದಿಯಲ್ಲಿ ಪರಾಠ ವ್ಯಾಪಾರ ಮಾಡುತ್ತಾನೆ 9ರ ಪೋರ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿಬದಿಯಲ್ಲಿ ಪರಾಠ ವ್ಯಾಪಾರ ಮಾಡುತ್ತಾನೆ 9ರ ಪೋರ: ವಿಡಿಯೋ ವೈರಲ್

ಫರೀದಾಬಾದ್: 13 ವರ್ಷದ ಬಾಲಕ ಇತ್ತೀಚೆಗೆ ತನ್ನ ಅದ್ಭುತವಾದ ಅಡುಗೆ ಕೌಶಲ್ಯದಿಂದ ವೈರಲ್ ಆದ ನಂತರ ಇದೀಗ, ಫರೀದಾಬಾದ್ ನ ಬಾಲಕನೊಬ್ಬ ಪರಾಠ ಮಾಡುವ ದೃಶ್ಯ ವೈರಲ್ ಆಗಿದೆ. ಫರೀದಾಬಾದ್‌ನ ಈ 9 ವರ್ಷದ ಬಾಲಕನ ಪರಾಠ ಫ್ಲಿಪ್ಪಿಂಗ್ ಕೌಶಲ್ಯಕ್ಕೆ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

9 ವರ್ಷದ ಪೋರ ಬೀದಿ ಬದಿಯ ವ್ಯಾಪಾರ ಮಾಡುತ್ತಿದ್ದು, ದೊಡ್ಡ ತವಾದಲ್ಲಿ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ತಯಾರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ತನ್ನ ವಿಶೇಷ ಕೌಶಲ್ಯದಿಂದ ದೊಡ್ಡವರಂತೆ ಪ್ರತಿ ಪರಾಠ ಮಾಡುವಾಗಲು ಅದನ್ನು ತಿರುಗಿಸಿದ್ದಾನೆ. ಅಲ್ಲದೆ ಎರಡೂ ಬದಿಯಲ್ಲೂ ಚೆನ್ನಾಗಿ ಬೇಯಿಸಿದ್ದಾನೆ.

ಜೆಸಿಬಿ ಮೇಲೆ ಕುಳಿತ ವಧು-ವರ..! ಆಮೇಲೆ ಆಗಿದ್ದೇನೆಂದು ತಿಳಿದ್ರೆ ಶಾಕ್‌ ಆಗ್ತೀರಾ

ಪರಿಣಿತನಂತೆ/ಅಡುಗೆಯನ್ನು ಚೆನ್ನಾಗಿ ಬಲ್ಲವನಂತೆ ಪರಾಠ ತಯಾರಿಸಿದ್ದಾನೆ. ಆಹಾರ ಪ್ರಿಯ ವಿಶಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, 1.4 ಮಿಲಿಯನ್ ವೀಕ್ಷಣೆಗಳೊಂದಿಗೆ ಭಾರಿ ವೈರಲ್ ಆಗಿದೆ.

ಬಾಲಕನ ಅಡುಗೆಯ ವೈಶಿಷ್ಟ್ಯ ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಅಲ್ಲದೆ ಬಾಲಕನ ಭವಿಷ್ಯದ ಬಗ್ಗೆಯೂ ಕಾಳಜಿ ವ್ಯಕ್ತಪಡಿಸಿದ್ದಾರೆ. ಬೀದಿ ಬದಿಯಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವ ಬದಲು ಆತ ಶಾಲೆಯಲ್ಲಿರಬೇಕಿತ್ತು ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...