ಮನಸ್ಸಿಗೂ ದೇಹಕ್ಕೂ ಉಲ್ಲಾಸ ತುಂಬುವ ನೃತ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ದಿನಂಪ್ರತಿ ಬಹಳಷ್ಟು ಡ್ಯಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
ಇಂಥದ್ದೇ ಒಂದು ವಿಡಿಯೋದಲ್ಲಿ ಏಳು ವರ್ಷದ ಬಾಲಕನೊಬ್ಬನ ನೃತ್ಯ ನೆಟ್ಟಿಗರ ಮನಸೂರೆಗೊಂಡಿದೆ. ಹಿಮಾಂಕ್ ಮಿಶ್ರಾ ಹೆಸರಿನ ಈ ಬಾಲಕ ಅಂಗ್ರೇಜ಼ೀ ಬೀಟ್ ಹಾಡಿಗೆ ಮಸ್ತ್ ಸ್ಟೆಪ್‌ಗಳನ್ನು ಹಾಕಿದ್ದಾನೆ.
ಗುರುಗ್ರಾಮದಲ್ಲಿ ಸೆಕ್ಸ್ ದಂಧೆ ಭೇದಿಸಿದ ಪೊಲೀಸರು: ಇಬ್ಬರು ವಿದೇಶಿ ಪ್ರಜೆಗಳು ಅಂದರ್
17 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ತ್ರೀಪೀಸ್ ಸೂಟ್‌ನಲ್ಲಿ ಕಂಗೊಳಿಸುತ್ತಿರುವ ಹಿಮಾಂಕ್, ಮದುವೆ ಸಮಾರಂಭವೊಂದರ ಡಿಜಿ ನೆಲದ ಮೇಲೆ ಕುಣಿದು ಕುಪ್ಪಳಿಸಿದ್ದಾನೆ. ಯೋ ಯೋ ಹನಿ ಸಿಂಗ್‌ರ ಕ್ಯಾಚೀ ಬೀಟ್‌ಗಳಿಗೆ ಸೂಪರ್ ಸ್ಟೆಪ್ ಹಾಕುತ್ತಿರುವ ಈತನ ಉತ್ಸಾಹ ನೋಡುಗರಿಗೆ ಮುದ ನೀಡಿದೆ.
https://www.youtube.com/watch?v=sQhBtwYV_F0