alex Certify ಒಬ್ಬನಿಗಾಗಿ ಐವರು ಯುವತಿಯರ ಕಿತ್ತಾಟ: ಜಾತ್ರೆಗೆ ಬಂದವರಿಗೆ ಉಚಿತ ಮನೋರಂಜನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬನಿಗಾಗಿ ಐವರು ಯುವತಿಯರ ಕಿತ್ತಾಟ: ಜಾತ್ರೆಗೆ ಬಂದವರಿಗೆ ಉಚಿತ ಮನೋರಂಜನೆ….!

ಬಿಹಾರ: ಒಬ್ಬ ಬಾಯ್​ಫ್ರೆಂಡ್​ಗಾಗಿ ಐವರು ಯುವತಿಯರು ಕಿತ್ತಾಡಿಗೊಂಡಿರುವ ಘಟನೆ ಬಿಹಾರದ ಸೋನ್​ಪುರದಲ್ಲಿ ನಡೆದಿದೆ.

ಒಬ್ಬನೇ ಐವರ ಜತೆ ಡೇಟಿಂಗ್​ ಮಾಡುತ್ತಿದ್ದ. ಅವನ ಅದೃಷ್ಟ ಚೆನ್ನಾಗಿರಲಿಲ್ಲ. ಸೋನ್​ಪುರದ ಮೇಳಕ್ಕೆ ಬಂದಾಗ ಐವರೂ ಗೆಳತಿಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆತನಿಗಾಗಿ ಐವರೂ ಜಗಳವಾಡಿಕೊಂಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಚಾಲಾಕಿ ಯುವಕ ತನ್ನ ಅನೇಕ ಗೆಳತಿಯರಲ್ಲಿ ಒಬ್ಬಳೊಂದಿಗೆ ಸೋನ್‌ಪುರ್ ಮೇಳಕ್ಕೆ ಬಂದಿದ್ದ. ತಮ್ಮ ಸ್ನೇಹಿತ ಬೇರೆಯ ಹುಡುಗಿ ಜತೆ ಡೇಟಿಂಗ್​ ಮಾಡುತ್ತಿದ್ದ ಸಂದೇಹವಿದ್ದ ಮತ್ತೆ ನಾಲ್ವರು ಅದೇ ಸ್ಥಳಕ್ಕೆ ಬಂದಿದ್ದರು. ಆದರೆ ಐದು ಮಂದಿಯ ಜತೆ ಆಟ ಚೆಲ್ಲಾಟ ಆಡುತ್ತಿದ್ದುದು ಇವರಿಗೆ ತಿಳಿದಿರಲಿಲ್ಲ. ತಮ್ಮನ್ನು ಬಿಟ್ಟು ಇನ್ನೊಬ್ಬಳು ಇರಬಹುದು ಎಂದು ಊಹಿಸಿದ್ದರು.

ಬೇರೊಬ್ಬಳ ಜತೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗೆಳೆಯನಿಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದರು. ಆದರೆ ಅಲ್ಲಿ ಆದದ್ದೇ ಬೇರೆ. ಆ ಯುವಕನ ಬಳಿ ನಾಲ್ಕೂ ಮಂದಿ ಹೋದಾಗ ಪರಿಸ್ಥಿತಿ ಕೈಮೀರಿತ್ತು. ಆತನ ಬದಲು ಐವರು ಯುವತಿಯರಲ್ಲಿ ಜಗಳ ಪ್ರಾರಂಭವಾಯಿತು. ಒಬ್ಬರನ್ನೊಬ್ಬರು ಒದೆಯುವುದು, ಕೂದಲನ್ನು ಹಿಡಿದು ಎಳೆದಾಡುವುದು, ಪರಸ್ಪರರ ಬಟ್ಟೆಗಳನ್ನು ಹರಿದು ಹಾಕಿರುವ ಘಟನೆ ನಡೆಯಿತು.

ಇದೇ ವೇಳೆ ಕೆಲವರು ಮಧ್ಯಪ್ರವೇಶಿಸಿ ಗಲಾಟೆ ತಡೆಯಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜಾತ್ರೆಗೆ ಬಂದವರು ಇದೇ ವೇಳೆ ಉಚಿತ ಮನೋರಂಜನೆ ನೋಡಿ ಖುಷಿಪಟ್ಟರು !

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...