alex Certify ‘ಸತ್ಯಮೇವ ಜಯತೇ-2’ ಚಿತ್ರದ ಹಾಡಿಗೆ ಬಾಲಕಿಯರ ಬಿಂದಾಸ್ ಸ್ಟೆಪ್ಸ್: ನಿಬ್ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸತ್ಯಮೇವ ಜಯತೇ-2’ ಚಿತ್ರದ ಹಾಡಿಗೆ ಬಾಲಕಿಯರ ಬಿಂದಾಸ್ ಸ್ಟೆಪ್ಸ್: ನಿಬ್ಬೆರಗಾದ ನೆಟ್ಟಿಗರು

ನಮ್ಮ ದೇಶದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ ಎಂಬುದಕ್ಕೆ ಈ ವೈರಲ್ ಆಗಿರುವ ವಿಡಿಯೋ ಸಾಕ್ಷಿಯಾಗಿದೆ. ಸತ್ಯಮೇವ ಜಯತೆ-2 ಚಿತ್ರದ ಕುಸು ಕುಸು ಹಾಡಿಗೆ ಮೂವರು ಬಾಲಕಿಯರು ನೃತ್ಯ ಮಾಡಿದ್ದು, ಈ ವಿಡಿಯೋ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.

ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವಂತೆ ಕಾಣುವ ಮೂವರು ಬಾಲಕಿಯರು ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಬಾಲಕಿಯರ ಅದ್ಭುತ ನೃತ್ಯದಿಂದ ಪ್ರಭಾವಿತರಾದ ನೋರಾ, ಡ್ಯಾನ್ಸ್ ದೀವಾನೆ ಸೀಸನ್ 3 ರಲ್ಲಿ ಭಾಗವಹಿಸಿದ ಉದಯ್ ಸಿಂಗ್ ಅವರು ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಮರು ಪೋಸ್ಟ್ ಮಾಡಿದ್ದಾರೆ.

ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಬಾಲಕಿಯರ ನೃತ್ಯದ ವಿಡಿಯೋ ವೈರಲ್ ಆದ ನಂತರ, ಮೂಲ ಹಾಡಿನಲ್ಲಿ ಡ್ಯಾನ್ಸ್ ಮಾಡಿರುವ ನಟಿ ನೋರಾ ಫತೇಹಿ ಅವರ ಗಮನವನ್ನು ಸೆಳೆದಿದೆ. ತುಂಬಾ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದೀರಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಬಾಲಕಿಯರ ಅದ್ಭುತ ನೃತ್ಯ ಪ್ರದರ್ಶನ ಕಂಡ ನೆಟ್ಟಿಗರು ಕೂಡ ನಿಬ್ಬೆರಗಗಾಗಿದ್ದಾರೆ. ಬಾಲಕಿಯರ ಪ್ರತಿಭೆಗೆ ಹ್ಯಾಟ್ಸಾಫ್ ಎಂದಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋವನ್ನು 7.4 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...