
ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಮುಂಭಾಗದಲ್ಲಿ ಹಾರವನ್ನು ಹಾಕಲಾಗಿರುವ ಟಾಟಾ ನೆಕ್ಸಾನ್ ಹೊಸ ಕಾರಿನಂತೆ ಕಾಣಿಸುತ್ತದೆ. ವಸತಿ ಸಮುಚ್ಚಯದ ಬಳಿ ನಿಲ್ಲಿಸಿದ ಬೈಕ್ಗಳ ಸಾಲಿಗೆ ಕಾರು ಡಿಕ್ಕಿ ಹೊಡೆಯುವುದನ್ನು ಕಾಣಬಹುದು.
ಕಾರು ಸಮೀಪಿಸುತ್ತಿರುವುದನ್ನು ನೋಡಿದ ವ್ಯಕ್ತಿಯೊಬ್ಬರು ಗೇಟ್ ತೆರೆದು ಪಕ್ಕಕ್ಕೆ ನಿಲ್ಲುತ್ತಾರೆ, ಅದಕ್ಕೆ ಪಾರ್ಕಿಂಗ್ ಗಾಗಿ ದಿಕ್ಕನ್ನು ಸಹ ತೋರಿಸುತ್ತಾರೆ. ಟಾಟಾ ನೆಕ್ಸಾನ್ ನೇರವಾಗಿ ನಿಲ್ಲಿಸಿದ ಬೈಕುಗಳ ಮೇಲೆ ಅಪ್ಪಳಿಸುತ್ತದೆ. ಒಂದು ಹಂತದಲ್ಲಿ ಸಮತೋಲನ ಕಳೆದುಕೊಂಡು ಒಂದು ಬದಿಗೆ ಉರುಳುತ್ತದೆ. ಗೇಟ್ ತೆಗೆದು ಡೈರೆಕ್ಷನ್ ನೀಡಿದ ವ್ಯಕ್ತಿ ಚಾಲಕನ ಸಹಾಯಕ್ಕೆ ಧಾವಿಸಿದ್ದು, ಸಕ್ಯುರಿಟಿ ಗಾರ್ಡ್ ಓಡಿ ಬರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅಷ್ಟರಲ್ಲೇ ಹತ್ತಾರು ಬೈಕ್ ಜಖಂ ಆಗಿರುತ್ತದೆ.
ಮನೆಗೆ ಗ್ರಾಂಡ್ ಆಗಮನ ಎಂದು ವೀಡಿಯೊವನ್ನು ಹಂಚಿಕೊಂಡ ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ. ಈ ವೀಡಿಯೊ ಟ್ವಿಟ್ಟರ್ ಬಳಕೆದಾರರನ್ನು ವಿವಿಧ ಕಮೆಂಟ್ ಗಳಿಗೆ ಆಸ್ಪದ ನೀಡಿದ್ದು, ಅನೇಕರು ಅಪಘಾತ ಹೇಗೆ ಸಂಭವಿಸಿರಬಹುದು ಎಂಬುದರ ವಿವರಣೆ ನೀಡಲು ಪ್ರಯತ್ನಿಸಿದರು.