alex Certify Viral Video: ಕಾಲೇಜು ವಿದ್ಯಾರ್ಥಿಗಳ ಹುಚ್ಚಾಟ; ಲಾಂಗ್ ಹಿಡಿದು ಚಲಿಸುತ್ತಿರುವ ರೈಲಿನಲ್ಲಿ ಡೆಡ್ಲಿ ಸ್ಟಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಕಾಲೇಜು ವಿದ್ಯಾರ್ಥಿಗಳ ಹುಚ್ಚಾಟ; ಲಾಂಗ್ ಹಿಡಿದು ಚಲಿಸುತ್ತಿರುವ ರೈಲಿನಲ್ಲಿ ಡೆಡ್ಲಿ ಸ್ಟಂಟ್

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಕಾಲೇಜ್ ಒಂದರ ವಿದ್ಯಾರ್ಥಿಗಳು ಚಲಿಸುತ್ತಿರುವ ರೈಲಿನಲ್ಲಿ ಲಾಂಗ್ ಹಿಡಿದು ಹುಚ್ಚಾಟ ಮೆರೆದಿದ್ದಾರೆ. ಇಂತಹದೊಂದು ಆಘಾತಕಾರಿ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ವಿಡಿಯೋದಲ್ಲಿ ಕಾಣುವಂತೆ ಮೂವರು ವಿದ್ಯಾರ್ಥಿಗಳು ರೈಲಿನ ಕಿಟಕಿ ಬಾಗಿಲಿನಲ್ಲಿ ನಿಂತಿದ್ದು, ಅವರ ಕೈಗಳಲ್ಲಿ ಲಾಂಗ್ ಇದೆ. ಮಧ್ಯೆ ಮಧ್ಯೆ ಘೋಷಣೆಗಳನ್ನು ಕೂಗುತ್ತಾ ಅವರು ಸಾಗಿದ್ದು, ಓರ್ವ ನಂತೂ ಲಾಂಗ್ ನಿಂದ ರೈಲಿನ ಕಂಪಾರ್ಟ್ಮೆಂಟಿಗೆ ಹೊಡೆದಿದ್ದಾನೆ.

ಮುಂದಿನ ಬಾಗಿಲಿನಲ್ಲಿ ನಿಂತವನೊಬ್ಬ ತನ್ನ ಮೊಬೈಲ್ ನಲ್ಲಿ ಈ ವಿಡಿಯೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಬಳಿಕ ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳಾದ ಅನ್ಬರಸು, ರವಿಚಂದ್ರನ್ ಹಾಗೂ ಅರುಳ್ ಎಂಬ ಮೂವರನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...