alex Certify ಕೊಲೆಸ್ಟ್ರಾಲ್​ ಬಗ್ಗೆ ಪಂಜಾಬಿಗರು ತಲೆಕೆಡಿಸಿಕೊಳ್ಳಲ್ಲ ಎಂದು ಟ್ವೀಟ್​: ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲೆಸ್ಟ್ರಾಲ್​ ಬಗ್ಗೆ ಪಂಜಾಬಿಗರು ತಲೆಕೆಡಿಸಿಕೊಳ್ಳಲ್ಲ ಎಂದು ಟ್ವೀಟ್​: ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆ

ನಮ್ಮಲ್ಲಿ ಬಹುಪಾಲು ಜನರು ಬೀದಿ-ಆಹಾರ ಅಥವಾ ಜಂಕ್ ಅನ್ನು ತಿನ್ನಲು ಇಷ್ಟಪಡುತ್ತಾರೆ. ನಮ್ಮ ಪ್ರೀತಿಯ ಗೋಲ್ಗಪ್ಪಗಳಿಂದ ಮೊಮೊಸ್ ಮತ್ತು ಷಾವರ್ಮಾಗಳವರೆಗೆ, ಆ ಕಡುಬಯಕೆಗಳನ್ನು ಪೂರೈಸಲು ಆಯ್ಕೆ ಮಾಡಲು ಸಾಕಷ್ಟು ಇವೆ.

ಆದಾಗ್ಯೂ, ಕೆಲವೊಮ್ಮೆ, ಆಹಾರವನ್ನು ತಿನ್ನುವಾಗ, ಅದು ಎಷ್ಟು ಅನಾರೋಗ್ಯಕರವಾಗಿದೆ ಎಂಬ ಆಲೋಚನೆಯು ನಮ್ಮ ಮನಸ್ಸಿಗೆ ಬರಬಹುದು. ಆದರೆ, ಪಂಜಾಬಿಗಳಿಗೆ ಹೀಗೆ ಅಪರಾಧ ಮನೋಭಾವ ಕಾಡುವುದೇ ಇಲ್ಲ ಎಂಬ ಪೋಸ್ಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜನರು ವಿಭಿನ್ನ ನಿಲುವು ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ಪೋಸ್ಟ್ ಅನ್ನು ಹಾರ್ದಿಕ್ ರಾಥೋಡ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ಪ್ರಕಾರ, ಪಂಜಾಬಿ ಜನರು ಕೊಲೆಸ್ಟ್ರಾಲ್ ಎಂಬ ಪದದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವು ಇಂಗ್ಲಿಷನ್​ನ ಕೊಲೆಸ್ಟ್ರಾಲ್​ (cholestrol) ಪದದ ಐದು ಅಕ್ಷರಗಳನ್ನು ಮಾತ್ರ ನೋಡುತ್ತಾರೆ. ಅಂದರೆ “ಚೋಲೆ” ಮಾತ್ರ ಅವರ ಕಣ್ಣಿಗೆ ಕಾಣಿಸುತ್ತದೆ. ಅದಕ್ಕಾಗಿ ಚೋಲೆ ಮಸಾಲೆ ಸೇರಿದಂತೆ ಕೊಲೆಸ್ಟ್ರಾಲ್​ ಇರುವ ಎಲ್ಲಾ ಆಹಾರವನ್ನೂ ತಿನ್ನುತ್ತಾರೆ ಎಂದು ಬರೆದಿದ್ದಾರೆ.

ಇದು ತಪ್ಪು ಎಂದು ಹಲವರು ವಾದಿಸುತ್ತಿದ್ದರೆ, ನಿಜ ನಿಜ ಎನ್ನುತ್ತಿದ್ದಾರೆ ಇನ್ನು ಕೆಲವರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...