ನಮ್ಮಲ್ಲಿ ಬಹುಪಾಲು ಜನರು ಬೀದಿ-ಆಹಾರ ಅಥವಾ ಜಂಕ್ ಅನ್ನು ತಿನ್ನಲು ಇಷ್ಟಪಡುತ್ತಾರೆ. ನಮ್ಮ ಪ್ರೀತಿಯ ಗೋಲ್ಗಪ್ಪಗಳಿಂದ ಮೊಮೊಸ್ ಮತ್ತು ಷಾವರ್ಮಾಗಳವರೆಗೆ, ಆ ಕಡುಬಯಕೆಗಳನ್ನು ಪೂರೈಸಲು ಆಯ್ಕೆ ಮಾಡಲು ಸಾಕಷ್ಟು ಇವೆ.
ಆದಾಗ್ಯೂ, ಕೆಲವೊಮ್ಮೆ, ಆಹಾರವನ್ನು ತಿನ್ನುವಾಗ, ಅದು ಎಷ್ಟು ಅನಾರೋಗ್ಯಕರವಾಗಿದೆ ಎಂಬ ಆಲೋಚನೆಯು ನಮ್ಮ ಮನಸ್ಸಿಗೆ ಬರಬಹುದು. ಆದರೆ, ಪಂಜಾಬಿಗಳಿಗೆ ಹೀಗೆ ಅಪರಾಧ ಮನೋಭಾವ ಕಾಡುವುದೇ ಇಲ್ಲ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ವಿಭಿನ್ನ ನಿಲುವು ವ್ಯಕ್ತಪಡಿಸುತ್ತಿದ್ದಾರೆ.
ವೈರಲ್ ಪೋಸ್ಟ್ ಅನ್ನು ಹಾರ್ದಿಕ್ ರಾಥೋಡ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ಪ್ರಕಾರ, ಪಂಜಾಬಿ ಜನರು ಕೊಲೆಸ್ಟ್ರಾಲ್ ಎಂಬ ಪದದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವು ಇಂಗ್ಲಿಷನ್ನ ಕೊಲೆಸ್ಟ್ರಾಲ್ (cholestrol) ಪದದ ಐದು ಅಕ್ಷರಗಳನ್ನು ಮಾತ್ರ ನೋಡುತ್ತಾರೆ. ಅಂದರೆ “ಚೋಲೆ” ಮಾತ್ರ ಅವರ ಕಣ್ಣಿಗೆ ಕಾಣಿಸುತ್ತದೆ. ಅದಕ್ಕಾಗಿ ಚೋಲೆ ಮಸಾಲೆ ಸೇರಿದಂತೆ ಕೊಲೆಸ್ಟ್ರಾಲ್ ಇರುವ ಎಲ್ಲಾ ಆಹಾರವನ್ನೂ ತಿನ್ನುತ್ತಾರೆ ಎಂದು ಬರೆದಿದ್ದಾರೆ.
ಇದು ತಪ್ಪು ಎಂದು ಹಲವರು ವಾದಿಸುತ್ತಿದ್ದರೆ, ನಿಜ ನಿಜ ಎನ್ನುತ್ತಿದ್ದಾರೆ ಇನ್ನು ಕೆಲವರು.