alex Certify ಸಾಂಬಾರ್​ನಲ್ಲಿ ಅದ್ದಿ ತಿನ್ನುವ ಬಿಸಿಬಿಸಿ ಕುಲ್ಫಿ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂಬಾರ್​ನಲ್ಲಿ ಅದ್ದಿ ತಿನ್ನುವ ಬಿಸಿಬಿಸಿ ಕುಲ್ಫಿ ಫೋಟೋ ವೈರಲ್

ಕುಲ್ಫಿ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಆದರೆ ಎಂದಾದರೂ ಬಿಸಿಬಿಸಿ ಕುಲ್ಫಿ ತಿಂದಿರುವಿರಾ? ಇದೇನಿದು ಕುಲ್ಫಿ ಬಿಸಿಬಿಸಿಯೇ ಎಂದು ಎನಿಸಬಹುದು. ನೀವು ಅಂದುಕೊಂಡದ್ದು ನಿಜ. ಬಿಸಿಬಿಸಿ ಕುಲ್ಫಿ ಮಾತ್ರವಲ್ಲದೇ ಸಾಂಬಾರ್​ನಲ್ಲಿಯೂ ಅದ್ದುಕೊಂಡು ಕುಲ್ಫಿ ತಿನ್ನಬೇಕು.‌

ನೀವು ಕೇಳ್ತಿರೋದು ನಿಜ. ಹಾಗಾದರೆ ಇದೆಂಥ ಕುಲ್ಫಿ ಎಂದ್ರಾ ? ಅಸಲಿಗೆ ಇದು ಐಸ್​ಕ್ರೀಮ್​ ಕುಲ್ಫಿ ಅಲ್ಲ. ಬದಲಿಗೆ ಕುಲ್ಫಿ ರೂಪದ ಇಡ್ಲಿ. ಹೌದು, ಇಲ್ಲಿ ಕಾಣಿಸ್ತಿರೋದು ಇಡ್ಲಿ. ಕುಲ್ಫಿ ರೂಪದಲ್ಲಿಯೇ ಇಡ್ಲಿಯನ್ನು ತಯಾರು ಮಾಡಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವೈರಲ್ ಫೋಟೋದಲ್ಲಿ ಇಡ್ಲಿಗಳು ಒಂದು ಕಡ್ಡಿ ಹೊಂದಿರುವುದನ್ನು ನೋಡಬಹುದು. ಇದರಿಂದ ಅದು ಐಸ್ ಕ್ರೀಮ್​ನಂತೆ ಕಾಣಿಸುತ್ತದೆ. ದಕ್ಷಿಣ ಭಾರತದ ಪಾಕಪದ್ಧತಿಯು ಅದರ ನೋಟದಲ್ಲಿ ಮಾತ್ರ ನವೀನತೆಯನ್ನು ಪಡೆದುಕೊಂಡಿದೆ ಮತ್ತು ಬೇರೇನೂ ಇಲ್ಲ. ಇದನ್ನು ಸಾಂಬಾರಿನಲ್ಲಿ ಅದ್ದುವುದನ್ನು ನಾವು ನೋಡಬಹುದು. ಇದನ್ನು ತಿಳಿದ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...