
ಯುಎಸ್ನ ಓಹಿಯೋದಲ್ಲಿ ಬಿರುಗಾಳಿ ಸಹಿತ ಮಳೆಯ ನಡುವೆ ಬಡಿದ ಸಿಡಿಲು ದೊಡ್ಡ ಮರವನ್ನು ಹಾನಿಗೊಳಿಸಿತು, ಮರವು ಒಳಗಿನಿಂದ ಸುಟ್ಟುಹೋದ ಘಟನೆ ನಡೆಯಿತು. ಮರ ಸುಡುವ ಚಿತ್ರವನ್ನು ಅಗ್ನಿಶಾಮಕ ಇಲಾಖೆ ಬುಧವಾರ ಫೇಸ್ಬುಕ್ನಲ್ಲಿ ಹಂಚಿಕೊಂಡಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಆಗಮಿಸಿದಾಗ, ಇದನ್ನು ಕಂಡು ಆಶ್ಚರ್ಯಚಕಿತರಾದರು.
ಬೆಂಕಿ ಹತ್ತಿಕೊಂಡಿರುವ ಮರದ ಬಗ್ಗ್ಗೆ ಮಾಹಿತಿ ಬಂದಿತು, ನಾವು ಬಂದಾಗ ಈ ಸ್ಥಿತಿಯಲ್ಲಿತ್ತು ಎಂದು ಅಗ್ನಿಶಾಮಕ ದಳ ಫೋಟೋ ಶೇರ್ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಒಂದಷ್ಟು ಪ್ರತಿಕ್ರಿಯೆ ಬಂದಿದ್ದು, ಆ ಸುಂದರವಾದ ಮರವನ್ನು ಕಳೆದುಕೊಳ್ಳಲು ಶೇಮ್ ಎನಿಸುತ್ತಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು, “ಅದು ತಲೆಕೆಳಗಾದ ಗೇಟ್ ಆಗಿರಬಹುದು’ ಎಂದು ವಿಚಿತ್ರ ಕಾಮೆಂಟ್ ಮಾಡಿದ್ದಾರೆ.