
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಸ್ತುತ ಯುಎಸ್ ಅಧ್ಯಕ್ಷರಾಗಿರುವ ಜೋ ಬಿಡೆನ್ ಅವರ ವ್ಯಾಟಿಕನ್ ಭೇಟಿಯ ವಿಡಿಯೋವೊಂದು ವೈರಲ್ ಆಗಿದೆ. ಇಟಲಿಯ ಟ್ರಾನ್ಸ್ಲೇಟರ್ ಮಹಿಳೆಯೊಬ್ಬರು ಟ್ರಂಪ್ ಭೇಟಿ ವೇಳೆ ನೀಡಿದ್ದ ನೋಟ ಹಾಗೂ ಜೋ ಬಿಡೆನ್ ವೇಳೆ ನೀಡಿರುವ ಪ್ರತಿಕ್ರಿಯೆ ಕಂಡು ನೆಟ್ಟಿಗರು ನಕ್ಕಿದ್ದಾರೆ.
ಪ್ರಸ್ತುತ ಅಧ್ಯಕ್ಷ ಜೋ ಬಿಡೆನ್ ಹಾಗೂ ಈ ಹಿಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಟಿಕನ್‌ಗೆ ಭೇಟಿ ನೀಡಿದಾಗ ಅವರು ಭಾಗವಹಿಸಿದ್ದ ಸಭೆಯನ್ನು ಹೋಲಿಸಲಾಗಿದೆ. ಟ್ರಂಪ್ ಭೇಟಿ ವೇಳೆ ಅವರ ಹಿಂದೆ ಕುಳಿತಿದ್ದ ಮಹಿಳೆಯು ಮಾಜಿ ಅಮೆರಿಕ ಅಧ್ಯಕ್ಷರನ್ನು ದುರುಗುಟ್ಟಿ ನೋಡಿದ್ದಾರೆ. ಅದೇ ಇತ್ತೀಚೆಗೆ ವ್ಯಾಟಿಕನ್ ಭೇಟಿ ನೀಡಿದ್ದ ಜೋ ಬಿಡೆನ್ ಜೊತೆ ನಗುತ್ತಾ ಮಾತನಾಡಿದ್ದಾರೆ.
ಈ ಎರಡು ವ್ಯತಿರಿಕ್ತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದ್ದು, ಸದ್ಯ ವೈರಲ್ ಆಗಿದೆ. ಮಹಿಳೆಯ ವರ್ತನೆಗೆ ನೆಟ್ಟಿಗರು ನಗು ಬೀರಿದ್ದಾರೆ.