ಕೊರೋನಾ ವೈರಸ್ನಿಂದ ಜನರನ್ನು ಕಾಪಾಡಲು ಇರುವ ಅತಿ ದೊಡ್ಡ ಅಸ್ತ್ರವೆಂದರೆ ಸದ್ಯದ ಮಟ್ಟಿಗೆ ಲಸಿಕೆಯೊಂದೇ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ಕೊಡುವ ಮುನ್ನ ಲಸಿಕೆ ಪ್ರಮಾಣ ಪತ್ರ ಕೊಂಡೊಯ್ಯುವುದು ಕಡ್ಡಾಯ ಎಂಬಂತಾಗಿಬಿಟ್ಟಿದೆ.
ಗ್ಯಾಬ್ರಿಯೆಲ್ಲೆ ಪೆಲ್ಲೆರೋನ್ ಹೆಸರಿನ ಈ ಟ್ಯಾಟೂ ಕಲಾವಿದ ಎರಡು ಲಕ್ಷಕ್ಕೂ ಹೆಚ್ಚಿನ ಇನ್ಸ್ಟಾಗ್ರಾಂ ಫಾಲೋವರ್ಗಳನ್ನು ಹೊಂದಿದ್ದಾರೆ. ಅವರ ಬಳಿ ಬಂದ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ಪಡೆದ ಸಾಕ್ಷಿಯಾಗಿ ನೀಡಲಾದ ಕ್ಯೂಆರ್ ಕೋಡ್ ಅನ್ನು ತನ್ನ ಕೈ ಮೇಲೆ ಹಾಕಲು ಕೋರಿದ್ದಾನೆ.
ಕ್ಯಾನ್ಸರ್ ರೋಗಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್: ಚಿಕಿತ್ಸೆ, ಔಷಧಕ್ಕೆ ರಿಯಾಯ್ತಿ; ಸಿಎಂ ಬಸವರಾಜ ಬೊಮ್ಮಾಯಿ
ಇದಕ್ಕೆ ಖುಷಿಯಾಗಿ ಸ್ಪಂದಿಸಿದ ಗ್ಯಾಬ್ರಿಯೆಲ್ಲೆ, ಆ ವ್ಯಕ್ತಿಯ ಕೈ ಮೇಲೆ ಕ್ಯೂಆರ್ ಕೋಡ್ ಹಾಕಿದ್ದಾರೆ. ಆತ ತನ್ನ ಕೈಮೇಲಿನ ಟ್ಯಾಟೂ ಹಚ್ಚೆಯನ್ನು ಮ್ಯಾಕ್ಡೊನಾಲ್ಡ್ಸ್ ಔಟ್ಲೆಟ್ ಪ್ರವೇಶಿಸುವ ಮುನ್ನ, ತನ್ನ ಫೋನ್ನಲ್ಲಿ ಸ್ಕ್ಯಾನಿಂಗ್ ಮಾಡಿ, ಲಸಿಕೆ ಪಡೆದ ಸಾಕ್ಷ್ಯವನ್ನು ತೋರಿ ರೆಸ್ಟೋರೆಂಟ್ ಒಳ ಪ್ರವೇಶಿಸಿದ್ದಾರೆ.