alex Certify ಶೆರ್ವಾನಿ ಕಂಪನಿಯ ಜಾಹೀರಾತು ನೋಡಿ ಹುಬ್ಬೇರಿಸಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೆರ್ವಾನಿ ಕಂಪನಿಯ ಜಾಹೀರಾತು ನೋಡಿ ಹುಬ್ಬೇರಿಸಿದ ನೆಟ್ಟಿಗರು

ಕೋಲ್ಕತಾ: ಸದಾ ಒಂದಿಲ್ಲೊಂದು ಹೊಸ ತಂತ್ರವನ್ನು ಜಾಹೀರಾತು ಕಂಪನಿಗಳು ಮಾಡುತ್ತಲೇ ಇರುತ್ತವೆ. ಜನರನ್ನು ತನ್ನತ್ತ ಸೆಳೆದುಕೊಳ್ಳಲು ಇನ್ನಿಲ್ಲದ ಸರ್ಕಸ್​ ಮಾಡುತ್ತವೆ. ಅಂಥದ್ದರಲ್ಲಿ ಶೆರ್ವಾನಿ ಕಂಪೆನಿಯೊಂದು ವಿಭಿನ್ನವಾಗಿ ಗಮನ ಸೆಳೆದಿದೆ.

ಕೋಲ್ಕತಾದ ಶೆರ್ವಾನಿ ಕಂಪೆನಿಯು ತಮ್ಮ ಜಾಹೀರಾತನ್ನು ‘ಮಿಸ್ಸಿಂಗ್’ ಕಾಲಮ್‌ನಂತೆ ಮುದ್ರಿಸುವ ಮೂಲಕ ಜನರನ್ನು ಅಚ್ಚರಿಗೊಳಿಸಿದೆ. ಕೋಲ್ಕತ್ತಾದ ಟೆಲಿಗ್ರಾಫ್ ಪತ್ರಿಕೆಯಲ್ಲಿ ಮುದ್ರಿತವಾದ ಜಾಹೀರಾತನ್ನು ‘ಮಿಸ್ಸಿಂಗ್’ ಅಂಕಣ ಎಂದು ಬರೆಯಲಾಗಿತ್ತು, ಅದು ನಂತರ ಸುಲ್ತಾನ್-ದಿ ಕಿಂಗ್ ಆಫ್ ಶೆರ್ವಾನಿಯ ಜಾಹೀರಾತಾಗಿರುವುದು ತಿಳಿದುಬಂದಿದೆ.

ಮುದ್ರಣ ಜಾಹೀರಾತಿನ ಚಿತ್ರವನ್ನು ಬಳಕೆದಾರರು ಜನವರಿ 14 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಇದು 1,620 ಲೈಕ್‌ಗಳು ಮತ್ತು 160 ರಿಟ್ವೀಟ್‌ಗಳನ್ನು ಗಳಿಸಿದೆ. ಮಿಸ್ಸಿಂಗ್​ ಕಾಲಮ್​ ಸಾಮಾನ್ಯವಾಗಿ ಎಲ್ಲರ ಕಣ್ಣಿಗೆ ಹೋಗುತ್ತದೆ. ಅದರಲ್ಲಿಯೂ ದುಬಾರಿಯ ಶೆರ್ವಾನಿ ತೊಟ್ಟ ಯುವಕ ನಿಂತುಕೊಂಡಿರುವುದನ್ನು ನೋಡಿದರೆ ಖಂಡಿತವಾಗಿಯೂ ಎಲ್ಲರೂ ಅದನ್ನು ಓದುತ್ತಾರೆ. ಇದೇ ಕಾರಣಕ್ಕೆ ಇಂಥದ್ದೊಂದು ತಂತ್ರವನ್ನು ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...