alex Certify ಸರ್ಕಸ್​ ಪ್ರದರ್ಶನದ ವೇಳೆ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಸ್​ ಪ್ರದರ್ಶನದ ವೇಳೆ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ

ಸರ್ಕಸ್​​ನಲ್ಲಿ ಪ್ರದರ್ಶನ ನೀಡುತ್ತಿದ್ದ ಕರಡಿಯೊಂದು ತರಬೇತಿ ನೀಡುತ್ತಿದ್ದ ಮಹಿಳೆ ಮೇಲೆ ದಾಳಿ ನಡೆಸಿದ ಘಟನೆಯು ರಷ್ಯಾದ ಹಾರ್ಲೆಕ್ವಿನ್​​ ಟ್ರಾವೆಲ್ಲಿಂಗ್​ ಸರ್ಕಸ್​​ನಲ್ಲಿ ನಡೆದಿದೆ. ಎದೆ ಝಲ್​ ಎನ್ನಿಸುವ ದೃಶ್ಯಾವಳಿಗಳನ್ನ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯಲಾಗಿದ್ದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸ್ಕಾರ್ಫ್​ ಹಾಗೂ ಟೊಪ್ಪಿಯನ್ನ ಧರಿಸಿದ ಕರಡಿಯು ಮಹಿಳೆಯ ಕಡೆಗೆ ನುಗ್ಗಿ ಆಕೆಯ ಕಾಲುಗಳನ್ನ ಎಳೆದು ಹಾಕಿದೆ. ಅಲ್ಲೇ ಇದ್ದ ಇನ್ನಿಬ್ಬರು ತರಬೇತುದಾರರು ಮಹಿಳೆಯನ್ನ ಕರಡಿಯ ದಾಳಿಯಿಂದ ತಪ್ಪಿಸಲು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದಾರೆ. ಸರ್ಕಸ್​ ವೀಕ್ಷಿಸಲು ಆಗಮಿಸಿದ ಮಕ್ಕಳು ಹಾಗೂ ಪೋಷಕರು ಈ ಘಟನೆಯನ್ನ ನೋಡಿ ದಂಗಾಗಿದ್ದಾರೆ.

ಆದರೆ ಆಶ್ಚರ್ಯಕರ ವಿಚಾರ ಅಂದರೆ ಈ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದರೂ ಸರ್ಕಸ್​ ಕಂಪನಿ ಮಾತ್ರ ಈ ರೀತಿ ಘಟನೆ ನಡೆದೇ ಇಲ್ಲ ಎಂದು ವಾದ ಮಾಡಿದೆ. ಈ ರೀತಿಯ ಯಾವುದೇ ಘಟನೆ ನಮ್ಮಲ್ಲಿ ನಡೆದಿಲ್ಲ. ಕರಡಿಗಳು ಈಗ ಸಂತಾನೋತ್ಪತ್ತಿ ವಸಂತದಲ್ಲಿವೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...