ಸರ್ಕಸ್ನಲ್ಲಿ ಪ್ರದರ್ಶನ ನೀಡುತ್ತಿದ್ದ ಕರಡಿಯೊಂದು ತರಬೇತಿ ನೀಡುತ್ತಿದ್ದ ಮಹಿಳೆ ಮೇಲೆ ದಾಳಿ ನಡೆಸಿದ ಘಟನೆಯು ರಷ್ಯಾದ ಹಾರ್ಲೆಕ್ವಿನ್ ಟ್ರಾವೆಲ್ಲಿಂಗ್ ಸರ್ಕಸ್ನಲ್ಲಿ ನಡೆದಿದೆ. ಎದೆ ಝಲ್ ಎನ್ನಿಸುವ ದೃಶ್ಯಾವಳಿಗಳನ್ನ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯಲಾಗಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಕಾರ್ಫ್ ಹಾಗೂ ಟೊಪ್ಪಿಯನ್ನ ಧರಿಸಿದ ಕರಡಿಯು ಮಹಿಳೆಯ ಕಡೆಗೆ ನುಗ್ಗಿ ಆಕೆಯ ಕಾಲುಗಳನ್ನ ಎಳೆದು ಹಾಕಿದೆ. ಅಲ್ಲೇ ಇದ್ದ ಇನ್ನಿಬ್ಬರು ತರಬೇತುದಾರರು ಮಹಿಳೆಯನ್ನ ಕರಡಿಯ ದಾಳಿಯಿಂದ ತಪ್ಪಿಸಲು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದಾರೆ. ಸರ್ಕಸ್ ವೀಕ್ಷಿಸಲು ಆಗಮಿಸಿದ ಮಕ್ಕಳು ಹಾಗೂ ಪೋಷಕರು ಈ ಘಟನೆಯನ್ನ ನೋಡಿ ದಂಗಾಗಿದ್ದಾರೆ.
ಆದರೆ ಆಶ್ಚರ್ಯಕರ ವಿಚಾರ ಅಂದರೆ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರೂ ಸರ್ಕಸ್ ಕಂಪನಿ ಮಾತ್ರ ಈ ರೀತಿ ಘಟನೆ ನಡೆದೇ ಇಲ್ಲ ಎಂದು ವಾದ ಮಾಡಿದೆ. ಈ ರೀತಿಯ ಯಾವುದೇ ಘಟನೆ ನಮ್ಮಲ್ಲಿ ನಡೆದಿಲ್ಲ. ಕರಡಿಗಳು ಈಗ ಸಂತಾನೋತ್ಪತ್ತಿ ವಸಂತದಲ್ಲಿವೆ ಎಂದು ಹೇಳಿದೆ.