alex Certify ಬಾಸ್ ಇಲ್ಲದಿದ್ದಾಗ ಉದ್ಯೋಗಿ ಮಾಡಿದ್ದೇನು ಗೊತ್ತಾ..? ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಸ್ ಇಲ್ಲದಿದ್ದಾಗ ಉದ್ಯೋಗಿ ಮಾಡಿದ್ದೇನು ಗೊತ್ತಾ..? ವಿಡಿಯೋ ವೈರಲ್

ಶಾಲೆ ಅಥವಾ ಕಾಲೇಜುಗಳಲ್ಲಿ ಶಿಕ್ಷಕರು ತರಗತಿಯಿಂದ ಹೋದ ತಕ್ಷಣ ವಿದ್ಯಾರ್ಥಿಗಳೆಲ್ಲಾ ಬೊಬ್ಬಿಡಲು, ತಮಾಷೆ ಮಾಡಲು ಶುರುಮಾಡುತ್ತಾರೆ. ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಕಚೇರಿಗಳಲ್ಲೂ ಕೂಡ ಇದು ಭಿನ್ನವಾಗಿರುವುದಿಲ್ಲ. ಇಲ್ಲಿ ಕೂಡ ಉದ್ಯೋಗಿಗಳು ತಮಾಷೆ,  ಆಟಗಳು ಅಥವಾ ಯಾವುದೇ ಇತರ ಮೋಜಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಗ್ರಾಹಕರಿಲ್ಲದಿದ್ದಾಗ ಹಾಗೂ ಬಾಸ್ ಇನ್ನೂ ಬಂದಿರದಿದ್ದಲ್ಲಿ ಉದ್ಯೋಗಿಗಳು ಈ ರೀತಿ ಮಾಡುವುದನ್ನು ಕಾಣಬಹುದು.

ಇದೀಗ, ಕೆಫೆ ಉದ್ಯೋಗಿಯೊಬ್ಬರು ಯಾರೂ ಇಲ್ಲದಿದ್ದ ವೇಳೆ, ಮಾಪ್ ಹಿಡಿದುಕೊಂಡು ಸಖತ್ತಾಗಿ ಕುಣಿದಿದ್ದಾರೆ. ಆದರೆ, ಹಿಂದೆ ಬಾಸ್ ಬಂದು ನಿಂತಿದ್ದನ್ನು ಆಕೆ ಗಮನಿಸದೆ, ನೃತ್ಯವನ್ನು ಮುಂದುವರೆಸಿದ್ದಾಳೆ. ಆಕೆಯ ಅದ್ಭುತ ನೃತ್ಯವನ್ನು ಬಾಸ್ ಕೂಡ ದೂರದಿಂದಲೇ ನೋಡಿ ಖುಷಿಪಟ್ಟಿದ್ದಾರೆ. ಡ್ಯಾನ್ಸ್ ಮಾಡುತ್ತಾ ಹಿಂದಿರುಗಿ ನೋಡಿದಾಗ ಬಾಸ್ ನಿಂತಿರುವುದನ್ನು ಕಂಡು ನಾಚಿಕೆಯಿಂದ ನಕ್ಕಿದ್ದಾಳೆ. ಈಕೆಯ ಡ್ಯಾನ್ಸ್ ಮೆಚ್ಚಿದ ಬಾಸ್ ಚಪ್ಪಾಳೆ ತಟ್ಟಿದ್ದಾರೆ.

ಈ ಉಲ್ಲಾಸದ ದೃಶ್ಯ ಅಂಗಡಿಯಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಟೋಫಿ ಯೆನ್ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಈಗ 1.6 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹಾಗೂ ಸಾವಿರಾರು ಮಂದಿ ನೆಟ್ಟಿಗರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಹಿನ್ನೆಲೆಯಲ್ಲಿ ಹಾಡು ಪ್ಲೇ ಆಗುತ್ತಿದ್ದಂತೆ ಮಹಿಳೆ ದಕ್ಷಿಣ ಆಫ್ರಿಕಾದ ಕೆಫೆಯ ಮಹಡಿಯನ್ನು ಒರೆಸುತ್ತಿದ್ದವಳು ಮಾಪ್ ಅನ್ನು ಕೈಬಿಟ್ಟು ನೃತ್ಯ ಮಾಡಲು ಪ್ರಾರಂಭಿಸಿದ್ದಾಳೆ. ಕೆಲವು ಸೆಕೆಂಡುಗಳ ನಂತರ ಒಳಗೆ ಬಂದ ಬಾಸ್ ಆಕೆಯ ನೃತ್ಯ ಪ್ರದರ್ಶನವನ್ನು ಸದ್ದಿಲ್ಲದೆ ನೋಡಿ ಮೆಚ್ಚಿಕೊಂಡಿದ್ದಾರೆ.

ವಿಡಿಯೋದಲ್ಲಿರುವ ವ್ಯಕ್ತಿಯೇ ಮಾಲೀಕ ಎಂದು ನಿಸ್ಸಂಶಯವಾಗಿ ತೋರುತ್ತಿದೆ. ಆದರೆ ಕೆಲವು ನೆಟ್ಟಿಗರು ಅವರು ಮಾಲೀಕರಲ್ಲ ಗ್ರಾಹಕರಾಗಿರಬಹುದು ಎಂದು ಹೇಳಿಕೊಂಡಿದ್ದಾರೆ.

ಆದರೆ, ಈ ದೃಶ್ಯ ನಿಜವಾಗಿಯೂ ಅನ್‌ಸ್ಕ್ರಿಪ್ಟ್ ಆಗಿದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋದಲ್ಲಿರುವ ಮಹಿಳೆ 5.3 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಕ್ರೇಜಿ ಗರ್ಲ್ ಎಂಬ ಜನಪ್ರಿಯ ಯೂಟ್ಯೂಬರ್ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...