alex Certify ದಿಟ್ಟ ಮಹಿಳೆಯ ಸಮಯಪ್ರಜ್ಞೆಗೆ ಜಾಹೀರಾತು ಮೂಲಕ ಗೌರವ ಸಲ್ಲಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿಟ್ಟ ಮಹಿಳೆಯ ಸಮಯಪ್ರಜ್ಞೆಗೆ ಜಾಹೀರಾತು ಮೂಲಕ ಗೌರವ ಸಲ್ಲಿಕೆ

ಬಸ್ ಚಾಲಕರೊಬ್ಬರ ಜೀವ ಉಳಿಸಿದ್ದ ಯೋಗಿತಾ ಸತವ್‌ ಹೆಸರಿನ 42 ವರ್ಷ ವಯಸ್ಸಿನ ಮಹಿಳೆಯೊಬ್ಬರ ಕಥೆಯೊಂದು ಇದೇ ಜನವರಿಯಲ್ಲಿ ವೈರಲ್ ಆಗಿತ್ತು. ಪುಣೆಯ ಯೋಗಿತಾ ತಾವು ಸಂಚರಿಸುತ್ತಿದ್ದ ಬಸ್ಸಿನ ಚಾಲಕ ಪ್ರಜ್ಞೆ ಕಳೆದುಕೊಳ್ಳುತ್ತಲೇ ತಕ್ಷಣ ಸ್ಟಿಯರಿಂಗ್ ಹಿಡಿದುಕೊಂಡು ಪರಿಸ್ಥಿತಿ ನಿಭಾಯಿಸಿದ್ದಾರೆ.

ಅಲ್ಲಿಂದ 10 ಕಿಮೀಗಳ ವರೆಗೂ ಬಸ್ಸು ಚಲಾಯಿಸಿಕೊಂಡು ಹೋದ ಯೋಗಿತಾ, ಸೂರ್ಯಾ ಆಸ್ಪತ್ರೆಗೆ ಚಾಲಕನನ್ನು ದಾಖಲಿಸುವ ಮೂಲಕ ಅವರ ಜೀವ ಉಳಿಸಿದ್ದಾರೆ. ಇದೀಗ ಈಕೆಯ ಈ ಸಾಹಸಗಾಥೆಯನ್ನು ಕೋಟಕ್ ಜನರಲ್ ಇನ್ಶೂರೆನ್ಸ್ ಕಂಪನಿ ಜಾಹೀರಾತು ಮಾಡಿದ್ದು, ಅದೀಗ ಆನ್ಲೈನ್‌ನಲ್ಲಿ ವೈರಲ್ ಆಗಿದೆ.

ಮಾಜಿ ಪ್ರಾಪರ್ಟಿ ಡೀಲರ್ ಈಗ ಶುಚಿರುಚಿ ಊಟ ನೀಡುವ ಸಂಚಾರಿ ಹೋಟೆಲ್‌ ಮಾಲಕಿ

ಜನವರಿ 7ರಂದು ಘಟಿಸಿದ ಈ ಘಟನೆಯಲ್ಲಿ, ಬಸ್ಸಿನಲ್ಲಿ ಯೋಗಿತಾ ಅಲ್ಲದೇ 28 ಪ್ರಯಾಣಿಕರು ಇದ್ದರು. ಇವರ ಪೈಕಿ 20 ಮಹಿಳೆಯರು ಹಾಗೂ 8 ಮಕ್ಕಳಿದ್ದರು. ಅವರೆಲ್ಲರೂ ಪುಣೆ ಬಳಿ ಪ್ರವಾಸಕ್ಕೆಂದು ತೆರಳುತ್ತಿದ್ದರು. ಮಾರ್ಗ ಮಧ್ಯೆ ಪ್ರಜ್ಞೆ ಕಳೆದುಕೊಂಡ ಚಾಲಕ ಇನ್ನೇನು ಕುಸಿದು ಬೀಳಲಿದ್ದ ವೇಳೆ ಕೂಡಲೇ ಓಡಿ ಬಂದ ಯೋಗಿತಾ, ಬಸ್ಸಿನ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡು ಪರಿಸ್ಥಿತಿಯನ್ನ ಧೈರ್ಯವಾಗಿ ನಿಭಾಯಿಸಿದರು.

“ಮಹಿಳೆಯರು ಚಾಲನೆ ಮಾಡಲು ಆಗುವುದಿಲ್ಲ ಎಂದು ನೀವು ಬಹಳಷ್ಟು ಬಾರಿ ಕೇಳಿದ್ದೀರಿ. ಈ ಬಾರಿ ಅದನ್ನು ಸುಳ್ಳೆಂದು ಸಾಬೀತು ಮಾಡಲು ಸಮಯ ಬಂದಿದೆ. ಸಂಕಷ್ಟದ ಸಮಯವನ್ನು ಭಾರೀ ದಿಟ್ಟತನದಿಂದ ನಿಭಾಯಿಸಿದ ಧೈರ್ಯವಂತೆ ಮಹಿಳೆಯೊಬ್ಬರ ಕಥೆಯೊಂದನ್ನು ನಿಮಗೆ ಅರ್ಪಿಸುತ್ತಿದ್ದೇವೆ. ಮಹಿಳಾ ಸಬಲೀಕರಣದ ವಿಚಾರದಲ್ಲಿ ನಿಮಗೆ ಸ್ಪೂರ್ತಿ ನೀಡಬಲ್ಲ ಕಥೆ #DriveLikeALady,” ಎಂದು ಯೂಟ್ಯೂಬ್‌ನಲ್ಲಿ ಈ ಕಥೆ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...