alex Certify ಬುರ್ಜ್ ಖಲೀಫಾ ಕಟ್ಟಡದ ತುತ್ತತುದಿಯಲ್ಲಿ ಜಾಹೀರಾತು ಶೂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುರ್ಜ್ ಖಲೀಫಾ ಕಟ್ಟಡದ ತುತ್ತತುದಿಯಲ್ಲಿ ಜಾಹೀರಾತು ಶೂಟ್

ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಮಹಿಳೆಯೊಬ್ಬರನ್ನು ನಿಲ್ಲಿಸಿ ಜಾಹೀರಾತೊಂದನ್ನು ಶೂಟ್ ಮಾಡಿರುವ ದುಬೈ ಮೂಲದ ಎಮಿರೇಟ್ಸ್‌ ಏರ್‌ಲೈನ್ಸ್‌ ನೆಟ್ಟಿಗರ ಹುಬ್ಬೇರಿಸಿದೆ.

ಬ್ರಿಟನ್ ಹಾಗೂ ಯುಎಇ ನಡುವೆ ಕ್ವಾರಂಟೈನ್ ಮುಕ್ತ ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರುವುದನ್ನು ಆಚರಿಸಲು ಈ ಜಾಹೀರಾತು ಶೂಟ್ ಮಾಡಲಾಗಿದೆ. ಈ ಜಾಹೀರಾತನ್ನು ಗ್ರೀನ್ ಸ್ಕ್ರೀನ್ ಅಥವಾ ಯಾವುದೇ ವಿಶೇಷ ಎಫೆಕ್ಟ್‌ಗಳಿಲ್ಲದೇ ಚಿತ್ರೀಕರಿಸಲಾಗಿದೆ ಎಂದು ಎಮಿರೇಟ್ಸ್‌ ಹೇಳಿಕೊಂಡಿದೆ.

ಕೊರೋನಾ ಬಳಿಕ ಮತ್ತೊಂದು ಬಿಗ್ ಶಾಕ್: ಸಾವಿನ ಮನೆಗೆ ತಳ್ಳುವ ಮಾರಕ ಮಾರ್ಬರ್ಗ್ ವೈರಸ್ ಆತಂಕ, WHO ಎಚ್ಚರಿಕೆ

“ನಾವು ಜಗತ್ತಿನ ಮೇಲಿದ್ದೇವೆ,” ಎಂಬ ಟೈಟಲ್‌ನ 33 ಸೆಕೆಂಡ್‌ಗಳ ಈ ವಿಡಿಯೋ ವೈರಲ್ ಆಗಿದ್ದು, ಸಿಬ್ಬಂದಿಯೊಬ್ಬರು ಪ್ರಯಾಣಿಕರನ್ನು ದುಬೈಗೆ ಮರಳಿ ಸ್ವಾಗತಿಸುತ್ತಿರುವುದನ್ನು ನೋಡಬಹುದಾಗಿದೆ.

ದುಬೈನ್ನು ಕೋವಿಡ್‌ ಕೆಂಪು ಪಟ್ಟಿಯಲ್ಲಿ ಸೇರಿಸಿದ್ದ ಬ್ರಿಟನ್, ಅಲ್ಲಿಂದ ಬರುವ ಪ್ರಯಾಣಿಕರಿಗೆ ಹತ್ತು ದಿನಗಳ ಮಟ್ಟಿಗೆ ಹೊಟೇಲ್‌ಗಳಲ್ಲಿ ಕ್ವಾರಂಟೈನ್ ಆಗುವುದನ್ನು ಕಡ್ಡಾಯಗೊಳಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...