ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಮಹಿಳೆಯೊಬ್ಬರನ್ನು ನಿಲ್ಲಿಸಿ ಜಾಹೀರಾತೊಂದನ್ನು ಶೂಟ್ ಮಾಡಿರುವ ದುಬೈ ಮೂಲದ ಎಮಿರೇಟ್ಸ್ ಏರ್‌ಲೈನ್ಸ್ ನೆಟ್ಟಿಗರ ಹುಬ್ಬೇರಿಸಿದೆ.
ಬ್ರಿಟನ್ ಹಾಗೂ ಯುಎಇ ನಡುವೆ ಕ್ವಾರಂಟೈನ್ ಮುಕ್ತ ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರುವುದನ್ನು ಆಚರಿಸಲು ಈ ಜಾಹೀರಾತು ಶೂಟ್ ಮಾಡಲಾಗಿದೆ. ಈ ಜಾಹೀರಾತನ್ನು ಗ್ರೀನ್ ಸ್ಕ್ರೀನ್ ಅಥವಾ ಯಾವುದೇ ವಿಶೇಷ ಎಫೆಕ್ಟ್‌ಗಳಿಲ್ಲದೇ ಚಿತ್ರೀಕರಿಸಲಾಗಿದೆ ಎಂದು ಎಮಿರೇಟ್ಸ್ ಹೇಳಿಕೊಂಡಿದೆ.
ಕೊರೋನಾ ಬಳಿಕ ಮತ್ತೊಂದು ಬಿಗ್ ಶಾಕ್: ಸಾವಿನ ಮನೆಗೆ ತಳ್ಳುವ ಮಾರಕ ಮಾರ್ಬರ್ಗ್ ವೈರಸ್ ಆತಂಕ, WHO ಎಚ್ಚರಿಕೆ
“ನಾವು ಜಗತ್ತಿನ ಮೇಲಿದ್ದೇವೆ,” ಎಂಬ ಟೈಟಲ್‌ನ 33 ಸೆಕೆಂಡ್‌ಗಳ ಈ ವಿಡಿಯೋ ವೈರಲ್ ಆಗಿದ್ದು, ಸಿಬ್ಬಂದಿಯೊಬ್ಬರು ಪ್ರಯಾಣಿಕರನ್ನು ದುಬೈಗೆ ಮರಳಿ ಸ್ವಾಗತಿಸುತ್ತಿರುವುದನ್ನು ನೋಡಬಹುದಾಗಿದೆ.
ದುಬೈನ್ನು ಕೋವಿಡ್ ಕೆಂಪು ಪಟ್ಟಿಯಲ್ಲಿ ಸೇರಿಸಿದ್ದ ಬ್ರಿಟನ್, ಅಲ್ಲಿಂದ ಬರುವ ಪ್ರಯಾಣಿಕರಿಗೆ ಹತ್ತು ದಿನಗಳ ಮಟ್ಟಿಗೆ ಹೊಟೇಲ್‌ಗಳಲ್ಲಿ ಕ್ವಾರಂಟೈನ್ ಆಗುವುದನ್ನು ಕಡ್ಡಾಯಗೊಳಿಸಿತ್ತು.