ಟೋಕಿಯೋ ಒಲಿಂಪಿಕ್ಸ್ ವೇಳೆ ಅಶಿಸ್ತಿನ ವರ್ತನೆ ತೋರಿದ ಕುಸ್ತಿ ಪಟು ವಿನೇಶ್ ಫೋಗಟ್ ತಮ್ಮ ನಡವಳಿಕೆಗೆ ಕ್ಷಮೆಯಾಚಿಸಿ ಭಾರತೀಯ ಕುಸ್ತಿ ಫೇಫೆಡರೇಷನ್ಗೆ ಪತ್ರ ಬರೆದಿದ್ದಾರೆ.
ಒಲಿಂಪಿಕ್ಸ್ನ ಮಹಿಳೆಯರ ಕುಸ್ತಿ ಸ್ಪರ್ಧೆಯ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡು ಕೂಟದಿಂದ ಹೊರಬಿದ್ದ ಮೇಲೆ ತಮ್ಮ ಸಹ ಸ್ಪರ್ಧಿಗಳ ಜೊತೆಗೆ ಉಳಿದುಕೊಂಡು ತರಬೇತಿ ಮುಂದುವರೆಸದೇ ಇದ್ದಿದ್ದಲ್ಲದೇ, ಕ್ರೀಡಾಗ್ರಾಮದಲ್ಲಿ ತಮ್ಮ ಔಟ್ಫಿಟ್ ಮೇಲೆ ಭಾರತೀಯ ಒಲಿಂಪಿಕ್ಸ್ ತಂಡದ ಅಧಿಕೃತ ಸ್ಪಾನ್ಸರ್ ಹೆಸರಿನ ಬದಲಿಗೆ ವೈಯಕ್ತಿಕ ಸ್ಪಾನ್ಸರ್ ಹೆಸರಿದ್ದ ಬಟ್ಟೆ ಹಾಕಿದ್ದಕ್ಕಾಗಿ ವಿನೇಶ್ರನ್ನು ಮುಂಬರುವ ಕೂಟಗಳಲ್ಲಿ ಭಾಗವಹಿಸದಂತೆ ಭಾರತೀಯ ಕುಸ್ತಿ ಫೆಡರೇಷನ್ ನಿಷೇಧ ಮಾಡಿತ್ತು.
ಬಂಧನಕ್ಕೊಳಗಾಗುವ ಮುನ್ನ ನಟಿಯಿಂದ ಹೈಡ್ರಾಮಾ
ಕೂಟದ ವೇಳೆ ತಮಗಾಗುತ್ತಿದ್ದ ದೈಹಿಕ ಹಾಗೂ ಮಾನಸಿಕ ಸವಾಲುಗಳು ಹಾಗೂ ವೈಯಕ್ತಿಕ ಫಿಸಿಯೋ ಸೇರಿದಂತೆ ಅಗತ್ಯವಾದ ಸೇವೆಗಳಿಲ್ಲದೇ ಪರದಾಡಿದ್ದಾಗಿ ಅಮಾನತಾದ ಮಾರನೇ ದಿನ ವಿನೇಶ್ ಹೇಳಿಕೊಂಡಿದ್ದರು. ಕ್ಷಮೆಯಾಚನೆ ಬಳಿಕವೂ ವಿನೇಶ್ರನ್ನು ಮುಂಬರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಲು ಅವಕಾಶ ನೀಡುವುದು ಅನುಮಾನ ಎಂಬಂತಾಗಿದೆ.