ಕೊಪ್ಪಳ: ಹುಲಿ ಹೈದರ್ ಗ್ರಾಮದಲ್ಲಿ ಬೆಳಗ್ಗೆ 8ರಿಂದ 10 ಗಂಟೆಯೊಳಗೆ ಘರ್ಷಣೆಯಾಗಿದೆ. ಮೊದಲು ವೈಯಕ್ತಿಕ ಜಗಳವಾಗಿದ್ದು, ನಂತರ ಗುಂಪು ಘರ್ಷಣೆ ನಡೆದಿದೆ ಎಂದು ಬಳ್ಳಾರಿ ವಲಯ ಐಜಿಪಿ ಮನೀಶ್ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಅವರು ಮಾತನಾಡಿ, ಗುಂಪು ಘರ್ಷಣೆಯ ವೇಳೆ ಇಬ್ಬರು ವ್ಯಕ್ತಿಗಳ ಸಾವಾಗಿದೆ. ತನಿಖೆ ಪ್ರಗತಿ ಹಂತದಲ್ಲಿರುವುದರಿಂದ ಕಾರಣ ಏನೆಂದು ಹೇಳಲಾಗುವುದಿಲ್ಲ. ಇದು ಕೋಮು ಸಂಘರ್ಷದಂತೆ ಕಾಣುತ್ತಿಲ್ಲ. ಗುಂಪು ಘರ್ಷಣೆಯ ರೀತಿ ಇದೆ. ಹನುಮೇಶ್ ನಾಯಕ್ ಪಾತ್ರದ ಬಗ್ಗೆ ಈಗಲೇ ಏನು ಹೇಳಲಾಗಲ್ಲ. ಹುಲಿಹೈದರ್ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಐಜಿಪಿ ತಿಳಿಸಿದ್ದಾರೆ.