
ತಮಿಳುನಾಡಲ್ಲಿ ಎರಡು ವಾರಗಳಲ್ಲಿ ವಿಕ್ರಮ್ ಚಿತ್ರವು 150 ಕೋಟಿ ರೂ. ಗಳಿಸಿದ್ದು, ಚಿತ್ರದ ಸಕ್ಸಸ್ ಮೀಟ್ ಆಯೋಜನೆಗೊಂಡಿತ್ತು. ಕಮಲ್ ಹಾಸನ್, ನಿರ್ದೇಶಕ ಲೋಕೇಶ್ ಕನಕರಾಜ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸಹನಟ ವಿಜಯ್ ಸೇತುಪತಿ ಯಶಸ್ಸಿನ ಪಾರ್ಟಿಯಲ್ಲಿ ಪಾಲ್ಗೊಂಡು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿಕ್ರಮ್ ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿದ ಹೈ- ಆಕ್ಟೇನ್ ಆಕ್ಷನ್ ಎಂಟರ್‌ಟೈನರ್. ಈ ಚಿತ್ರದಲ್ಲಿ ಕಮಲ್ ಹಾಸನ್, ಫಹಾದ್ ಫಾಸಿಲ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರೋಲೆಕ್ಸ್ ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ. ಅವರ ಐದು ನಿಮಿಷಗಳ ಪಾತ್ರವು ಚಿತ್ರದ ಹೈಲೈಟ್‌ಗಳಲ್ಲಿ ಒಂದಾಗಿದೆ. ಕಾಳಿದಾಸ್ ಜಯರಾಮ್, ನರೇನ್, ವಸಂತಿ, ಗಾಯತ್ರಿ ಮತ್ತು ಸಂತಾನ ಭಾರತಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.